Skip to main content


ಜಿಯೋ ಫೋನಿಗೆ ಬಂತು ವಿಶ್ವದ ಅತಿ ಜನಪ್ರಿಯ App

Short by: NISHAN PUTHRAN.

'ಇಂಡಿಯಾ ಕಾ ಸ್ಮಾರ್ಟ್‍ಫೋನ್' ಜಿಯೋಫೋನ್‍ನಲ್ಲಿ ಫೇಸ್‍ಬುಕ್ ಲಭ್ಯ ಇರಲಿದೆ. ಫೇಸ್‍ಬುಕ್ ಅಪ್ಲಿಕೇಷನ್ ನ ಈ ಹೊಸ ಆವೃತ್ತಿಯನ್ನು ವಿಶೇಷವಾಗಿ ಜಿಯೋ ಫೋನ್‍ಗಾಗಿ ವಿನ್ಯಾಸಗೊಳಿಸಲಾಗಿರುವ ಜಿಯೋ ಕಿಯೋಸ್ ಎಂಬ ವೆಬ್ ಆಧಾರಿತ ಆಪರೇಟಿಂಗ್ ಸಿಸ್ಟಮ್‍ಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಭಾರತದಲ್ಲಿ 50 ಕೋಟಿಯಷ್ಟು ಫೀಚರ್ ಫೋನ್ ಬಳಕೆದಾರರಿಗೆ ಫೇಸ್‍ಬುಕ್ ಲಭಿಸುವಂತೆ ಮಾಡಲಿದೆ. ಯೋಫೋನ್‍ಗಾಗಿನ ಈ ಹೊಸ ಫೇಸ್‍ಬುಕ್ ಆಪ್ ಸಮಗ್ರ ಫೇಸ್‍ಬುಕ್ ಅನುಭವವನ್ನು ಒದಗಿಸುತ್ತದೆ, ಇದು ಜನರಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ.

Read more at One India Kannada - Click Here.

Comments