Skip to main content


ತನಗಾದ ಬೇಸರದ ಕುರಿತು ಕೊನೆಗೂ ಮಾತಾಡಿದ ಅರ್ಜುನ್ ಸರ್ಜಾ

ಪ್ರೇಮ ಬರಹ ಚಿತ್ರಕ್ಕೆ ಬಂದ ಪ್ರತಿಕ್ರಿಯೆ ಮತ್ತು ವಿಮರ್ಶೆಗಳನ್ನೋದಿ ಅರ್ಜುನ್ ಸರ್ಜಾ ಅವರಿಗೆ ಬೇಸರವಾಗಿದ್ದರ ಬಗ್ಗೆ ಗೊತ್ತಿರಬಹುದು. ಈ ಕುರಿತು ಶನಿವಾರ ನಡೆದ `ಪ್ರೇಮ ಬರಹ' ಚಿತ್ರದ ಸಂತೋಷ ಕೂಟದಲ್ಲಿ ಮಾತನಾಡಿದ ಅವರು, "ಜನ ಚಿತ್ರ ನೋಡಿ ಖುಷಿಪಟ್ಟಿದ್ದಾರೆ. ಆದರೆ, ಚಿತ್ರದ ವಿಮರ್ಶೆ ಬಂದಾಗ ಸ್ವಲ್ಪ ಬೇಸರ ಆಯ್ತು. ಕೆಲವು ಕಡೆ ಒಂದು ಸ್ಟಾರ್, ಎರಡು ಸ್ಟಾರ್ ಕೊಟ್ಟಿದ್ದಾರೆ. ಇಷ್ಟಕ್ಕೂ ನಾನು ಯಾವ ರೀತಿಯ ಚಿತ್ರ ಮಾಡಿದ್ದೇನೆ? ಚಿತ್ರದಲ್ಲಿ ವಲ್ಗಾರಿಟಿ ಇಲ್ಲ. ಡಬ್ಬಲ್ ಮೀನಿಂಗ್ ಸಂಭಾಷಣೆಗಳಿಲ್ಲ. ಒಂದು ಪ್ರೇಮಕಥೆಯನ್ನು ದೇಶಭಕ್ತಿಯ ಹಿನ್ನೆಲೆಯಲ್ಲಿ ಹೇಳಿದ್ದೇನೆ. ಯೋಧರ ಕಷ್ಟ-ಸುಖ ತೋರಿಸಿದ್ದೇನೆ. ಭಾವನಾತ್ಮಕ ಸಂಬಂಧಗಳ ಬಗ್ಗೆ ಹೇಳಿದ್ದೇನೆ. ಆದರೂ, ಯಾಕೆ ಇಷ್ಟು ಮಾರ್ಕ್ಸ್‌ ಅನ್ನೋದೇ ಗೊತ್ತಿಲ್ಲ. ಕಡಿಮೆ ಮಾರ್ಕ್ಸ್‌ ನೋಡಿ ಬೇಜಾರಾಗಿದ್ದು ನಿಜ," ಎನ್ನುತ್ತಾರೆ ಅರ್ಜುನ್ ಸರ್ಜಾ.

short by Shraman Jain/read more at EeNadu India