Skip to main content


ಮದ್ಯ ಸೇವಿಸಿ ಟೈಟ್‌ ಆದ ಕೋತಿಯಿಂದ ಕೀಟಲೆ !

Short by: NISHAN PUTHRAN.

ಬಾಣಸವಾಡಿ ಬಳಿಯ ಕಮ್ಮನಹಳ್ಳಿಯಲ್ಲಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ವೊಂದರಲ್ಲಿ ಮದ್ಯ ಸೇವಿಸಿದ ಮಂಗ ಸೋಮವಾರ ರಾತ್ರಿ ಕೀಟಲೆ ನಡೆಸಿದ ಘಟನೆ ನಡೆದಿದೆ. ಅಳಿದುಳಿದ ತಿಂಡಿಗಳು ಸುಲಭವಾಗಿ ಸಿಗುತ್ತಿದ್ದ ಕಾರಣ ಕಮ್ಮನಹಳ್ಳಿಯ ದಿವಾಕರ್‌ ಬಾರ್‌ಗೆ ಆಗಾಗ್ಗೆ ಮಂಗವೊಂದು ಬರುತ್ತಿತ್ತು. ಕುಡುಕರು ಸೇವಿಸಿ ಬಿಟ್ಟಿರುವ ಮದ್ಯದ ಗ್ಲಾಸ್‌ ಹಾಗೂ ಬಾಟಲಿಗಳಲ್ಲಿನ ಅಳಿದುಳಿದ ಮದ್ಯವನ್ನು ಸೇವಿಸುವ ಅಭ್ಯಾಸ ಮಾಡಿಕೊಂಡಿತ್ತು. 

Read more at Vijaya Karnataka - Click Here.

Comments