Skip to main content


ಸುಪ್ರೀಂ ಕೋರ್ಟ್ ನೀಡಿದ ಕಾವೇರಿ ತೀರ್ಪಿನ ಕುರಿತು ಡಿ ಬಾಸ್ ಏನಂದ್ರು?

Short by: Shraman Jain 

ನೆನ್ನೆ ಡಿ ಬಾಸ್ ಗೆ ಡಬಲ್ ಧಮಾಕ! ಯಾಕೆ ಅಂತ ಕೇಳ್ತಾ ಇದ್ದೀರಾ? ಹೇಳ್ತೀವಿ ಕೇಳಿ.. ನೆನ್ನೆ ಒಂದೆಡೆ ಹುಟ್ಟುಹಬದ ಸಂಭ್ರಮವಾದರೆ ಇನ್ನೊಂದೆಡೆ ಕಾವೇರಿ ಜಲ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು. ಈ ತೀರ್ಪಿನ ಬಗ್ಗೆ ಸ್ವತಃ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ. "ಕಾವೇರಿ ಗಲಾಟೆ ಸುಮಾರು ವರ್ಷದಿಂದ ನಡೆಯುತ್ತಲೇ ಇದೆ. ಕಾವೇರಿ ತೀರ್ಪು ಬಂತು ಅಂದ್ರೆ ಎಲ್ಲರಿಗೂ ಒಂಥರಾ ಭಯ ಶುರುವಾಗುತ್ತೆ. ಎಲ್ಲಿ ಬಂದ್ ಆಗುತ್ತೆ, ಎಲ್ಲಿ ಕರ್ಫ್ಯೂ ಹಾಕ್ತಾರೆ ಅಂತ. ಆದ್ರೆ, ಈ ದಿನ ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣವಿರುತ್ತೆ. ಯಾಕಂದ್ರೆ ಒಳ್ಳೆ ಸುದ್ದಿ ಸಿಕ್ಕಿದೆ. ಅದರಲ್ಲೂ ನನ್ನ ಹುಟ್ಟುಹಬ್ಬದ ದಿನ ಈ ಸುದ್ದಿ ಸಿಕ್ಕಿರೋದು ನನಗೆ ಖುಷಿ ಕೊಟ್ಟಿದೆ,'' ಎಂದು ದರ್ಶನ್ ಪ್ರತಿಕ್ರಿಯಿಸಿದ್ದಾರೆ.

Read more at Filmibeat Kannada

Comments