Skip to main content


ದರ್ಶನ್‌ 'ಯಜಮಾನ'ನಿಗೆ ಧ್ರುವಸರ್ಜಾ ಧ್ವನಿ!

Short by: PAWANRAJ 

ಧ್ರುವ ಸರ್ಜಾ ನಾಯಕರಾಗಿರುವ "ಭರ್ಜರಿ' ಚಿತ್ರಕ್ಕೆ ದರ್ಶನ್‌ ಹಿನ್ನೆಲೆ ಧ್ವನಿ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಧ್ರುವ, ದರ್ಶನ್‌ ಅವರ ಹೊಸ ಚಿತ್ರವೊಂದಕ್ಕೆ ಧ್ವನಿ ನೀಡಿದ್ದಾರೆ. ಕಳೆದ ತಿಂಗಳು ಮುಹೂರ್ತವಾದ ದರ್ಶನ್‌ ಅಭಿನಯದ "ಯಜಮಾನ' ಚಿತ್ರದ ಟೀಸರ್‌ಗೆ ಧ್ರುವ ಧ್ವನಿ ನೀಡಿರುವುದು ವಿಶೇಷ. "ಯಜಮಾನ' ಚಿತ್ರವನ್ನು ಬಿ.ಸುರೇಶ್‌ ಹಾಗೂ ಶೈಲಜಾ ನಾಗ್‌ ನಿರ್ಮಿಸುತ್ತಿದ್ದು, ಪಿ.ಕುಮಾರ್‌ ಈ ಸಿನಿಮಾದ ನಿರ್ದೇಶಕರು. ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಫೆವ್ರವರಿ 19ರಿಂದ ಆರಂಭವಾಗಲಿದೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ,"ಬಹದ್ದೂರ್‌' ಚೇತನ್‌ ಸಂಭಾಷಣೆ,  ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಶಂಕರ್‌, ದೇವರಾಜ್‌, ಧನಂಜಯ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಶುಕ್ರವಾರ ದರ್ಶನ್‌ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

ಚಿತ್ರದ ಬೊಂಬಾಟ್ ಫಸ್ಟ್ ಲುಕ್ ವೀಕ್ಷಿಸಿ - https://youtu.be/_q_s2069sQ0

Comments