Skip to main content


'ಟಗರು' ಚಿತ್ರ ವಿಮರ್ಶೆ!

ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಒಂದರ ನಂತರ ಒಂದರಂತೆ ವಿಭಿನ್ನ ಚಲನಚಿತ್ರಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತ ಬಂದಿದ್ದಾರೆ. ಮಫ್ತಿ ಚಿತ್ರದಲ್ಲಿ ಮಾಫಿಯ ಡಾನ್ ಪಾತ್ರಕ್ಕೆ ಜೀವವನ್ನು ನೀಡುವ ಮೂಲಕ ಚಿತ್ರದ ಗೆಲುವಿಗೆ ಮುಖ್ಯ ರೂವಾರಿಯಾಗಿದ್ದಾರೆ. ಮಫ್ತಿಯ ಹಾದಿಯಲ್ಲಿ ಮೂಡಿಬಂದಂತಹ ಇನ್ನೊಂದು ಚಿತ್ರವೇ "ಟಗರು".

ದುನಿಯಾ ಸೂರಿ ನಿರ್ದೇಶನದ ಟಗರು, ಹಾಡು ಮತ್ತು ಟೀಸರ್ ನಿಂದಲೇ ಸಾಕಷ್ಟು ಸೌಂಡ್ ಮಾಡಿ ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಸಂಚಲನ ಸೃಷ್ಟಿ ಮಾಡಿತ್ತು, ಇದರಿಂದ ಚಿತ್ರದ ಮೇಲೆ ಪ್ರೇಕ್ಷಕರಿಗೆ ಸಹಜವಾಗೇ ನಿರೀಕ್ಷೆಗಳು ಹೆಚ್ಚಿದ್ದವು.

ಹೇಗಿದೆ ಚಿತ್ರ? ಇಲ್ಲಿದೆ ನಮ್ಮ ಅನಿಸಿಕೆ!

ಶಿವಣ್ಣ ಅವರು ಮತ್ತೊಮ್ಮೆ ತಮ್ಮ ಮಾಸ್ ನಟನೆಯ ಮೂಲಕ ಪ್ರೇಕ್ಷಕರ ಮನ ಗೆಲ್ಲುದು ಪಕ್ಕಾ! ಅದಲ್ಲದೆ ಶಿವಣ್ಣ ಇಡೀ ಚಿತ್ರವನ್ನ ಆವರಿಸಿಕೊಂಡು ಮನರಂಜನೆಯ ರಸದೌತಣ ನೀಡಿದ್ದಾರೆ. ನಾಯಕಿಯರಾಗಿ ಮಾನ್ವಿತಾ ಹಾಗೂ ಭಾವನಾ ಅವರು ಕೊಟ್ಟ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಇನ್ನು ಮೊದಲ ಬಾರಿಗೆ ಖಳನಟನಾಗಿ ನಟಿಸಿರುವ ಧನಂಜಯ ಅವರು ನಿಜವಾದ ಡಾನ್ ಎಂಬಂತೆ ನಟಿಸಿದ್ದು ಆ ಪಾತ್ರಕ್ಕೆ ಜೀವನಿಡಿದ್ದಾರೆ. ಅವರ ಪಾತ್ರಕ್ಕೆ ಹಾಗು ಅಭಿನಯಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಖಳನಟನಾಗಿ ಕಂಚಿನ ಕಂಟದ ವಸಿಷ್ಠ ಅವರು ಕೂಡ ಎಂದಿನಂತೆ ಅಮೋಘವಾಗಿ ನಟಿಸಿದ್ದಾರೆ.


ಟಗರು ಚಿತ್ರದಲ್ಲಿ ತುಂಬಾ ವಿಭಿನ್ನ ಎನ್ನುವಂತಹ ಕಥೆಯಿಲ್ಲದ್ದಿದರು ಪ್ರೇಕ್ಷಕರನ್ನು ಮೆಚ್ಚಿಸುವ ಹಾಗೂ ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುವ ಅಂಶಗಳಂತೂ ಖಂಡಿತ ಇವೆ.
‎ಖಡಕ್ ಪೋಲಿಸ್ ಅಧಿಕಾರಿ ಪಾತ್ರಧಾರಿ ಶಿವಣ್ಣ ರವರು ರೌಡಿಗಳ ಅಟ್ಟಹಾಸವನ್ನ  ಹೇಗೆ ಮಟ್ಟ ಹಾಕುತ್ತಾರೆ? ಇದೆಲ್ಲದರ ನಡುವೆ ನಾಯಕಿಯರು ಮಾನ್ವಿತಾ ಮತ್ತು ಭಾವನಾ ಇವರ ಪಾತ್ರಗಳೇನು? ಇದರಿಂದ ಚಿತ್ರಕಥೆ ಪಡೆದುಕೊಳ್ಳುವ ತಿರುವುಗಳೇನು? ಎಲ್ಕದಕ್ಕೂ ಉತ್ತರ ತಿಳಿಯಲು ಈ ಕೂಡಲೆ ಪಕ್ಕದ ಚಿತ್ರ ಮಂದಿರಗಳಲ್ಲಿ ಟಗರು ಚಿತ್ರವನ್ನು ವಿಕ್ಷಿಸಿ..

ಒಟ್ಟಾರೆ ಹೇಳಬೇಕೆಂದರೆ ಯಾವುದೇ ನಿರೀಕ್ಷೆಯಿಲ್ಲದೆ  ಚಿತ್ರಮಂದಿರಕ್ಕೆ ಹೋದರೆ ಒಳ್ಳೆಯ ಮಾಸ್ ಚಿತ್ರವನ್ನು ನೋಡಿ ಆನಂದಿಸಬಹುದು. ಅದರಲ್ಲೂ ಅನೇಕ ಸಂಭಾಷಣೆ ಮತ್ತು ಸನ್ನಿವೇಶಗಳು ಸಂಪೂರ್ಣ ಮಾಸ್ ಪ್ರೇಕ್ಷಕರಿಗೆ ಒಳ್ಳೆಯ ಮನೊರಂಜನೆ ನೀಡುವುದಂತೂ ಖಚಿತ!

Beeshort Rating - 3.5/5 | ವಿಮರ್ಶೆ - ಸಾಗರ್ ಪಡಿವಾಳ್.