Skip to main content


'ಆರೆಂಜೆ' ನಲ್ಲಿ ಗಣೇಶ್ ಗೆ ಪ್ರಿಯಾ ಆನಂದ್ ಜೋಡಿ

Short by: PAWANRAJ

ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾ ಆರೆಂಜ್ ಚಿತ್ರೀಕರಣ ಮೊನ್ನೆ 11ಕ್ಕೆ ಆರಂಭವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಗೆ ನಾಯಕಿಯನ್ನು ನಿರ್ದೇಶಕರು ಹುಡುಕುತ್ತಿದ್ದರು. ಅಂತಿಮವಾಗಿ ರಾಜಕುಮಾರ ಚಿತ್ರದ ಖ್ಯಾತಿಯ ಪ್ರಿಯಾ ಆನಂದ್ ನಟಿಸುವುದು ಪಕ್ಕಾ ಆಗಿದೆ. 

ತಮ್ಮ ಮೊದಲ ಚಿತ್ರ ರಾಜಕುಮಾರ ಹಿಟ್ ಆದ ನಂತರ ಉತ್ತಮ ಚಿತ್ರಕ್ಕಾಗಿ ಕಾಯುತ್ತಿದ್ದ ಪ್ರಿಯಾ ಆನಂದ್ ಆರೆಂಜ್ ನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ಗಣೇಶ್ ಗೆ ಜೋಡಿಯಾಗಿ ವಿಶಿಷ್ಟ ನಾಯಕಿಗಾಗಿ ಹುಡುಕಾಡುತ್ತಿದ್ದೆ. ಪ್ರಿಯಾ ಸರಿಯಾದ ಜೋಡಿ ಎಂದು ಅನಿಸಿತು. ಅವರ ಸಿನಿಮಾ ವೃತ್ತಿ ಬಾಲಿವುಡ್ ನಿಂದ ಮಾಲಿವುಡ್ ವರೆಗೆ ವಿಸ್ತರಣೆಯಾಗಿದೆ. ತಮ್ಮ ವಿಶಿಷ್ಟ ನಟನೆ ಮೂಲಕ ಚಿತ್ರದಲ್ಲಿ ಪ್ರೇಕ್ಷಕರ ಮನಗೆಲ್ಲಬಹುದು ಎಂಬ ವಿಶ್ವಾಸ ನನಗಿದೆ. ಗಣೇಶ್ ಗೆ ಹೊಸ ಜೋಡಿಯನ್ನು ಹುಡುಕುತ್ತಿದ್ದಾಗ ಪ್ರಿಯಾ ಅವರೇ ಸೂಕ್ತ ಎನಿಸಿ ಅವರನ್ನು ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ರಾಜ್.

Read more at Kannadaprabha

Comments