Skip to main content


"ರಿಯಾ" ಳನ್ನ ಎತ್ತಿ ಮುದ್ದಾಡಿದ ರಾಕಿಂಗ್ ಸ್ಟಾರ್


ಯಶ್ ಮತ್ತು ರಾಧಿಕಾ ಪಂಡಿತ್ ಕಳೆದ ಹದಿನೈದು ದಿನಗಳಿಂದ ಚಿಕಾಗೋದಲ್ಲಿ ಬಿಡು ಬಿಟ್ಟಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಜೀವನದ ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನ ರಾಕಿಂಗ್ ಸ್ಟಾರ್ ಮತ್ತು ರಾಧಿಕಾ ಇಬ್ಬರು ತುಂಬಾ ಚೆನ್ನಾಗಿ ಎಂಜಾಯ್ ಮಾಡುತ್ತಾರೆ. ರಾಧಿಕಾ ಅವರ ಸಹೋದರ ಗೌರಂಗ್ ಹಾಗೂ ಅತ್ತಿಗೆ ಸಹನ ಅವರಿಗೆ ಹೆಣ್ಣು ಮಗು ಜನಿಸಿದ್ದು ತಮ್ಮ ಮನೆಗೆ ಪುಟ್ಟ ಅಥಿತಿಯನ್ನ ಬರಮಾಡಿಕೊಳ್ಳಲು ರಾಧಿಕಾ ಫ್ಯಾಮಿಲಿ ವಾರಕ್ಕೂ ಮುಂಚೆಯೇ ಚಿಕಾಗೋಗೆ ಪ್ರಯಾಣ ಬೆಳೆಸಿತ್ತು.ಯಶ್ ಕೂಡ ಸೊಸೆಯನ್ನ ನೋಡಲು ಚಿಕಾಗೋಗೆ ಭೇಟಿ ಕೊಟ್ಟಿದ್ದು ಮನೆಯವರೆಲ್ಲರೂ ಸೇರಿ ಮುದ್ದು ಮಗುವಿಗೆ ನಾಮಕರಣ ಮಾಡಿದ್ದಾರೆ. ಹೌದು ಯಶ್ ಹಾಗೂ ರಾಧಿಕಾ ತಮ್ಮ ಸೊಸೆಗೆ 'ರಿಯಾ' ಎಂದು ಹೆಸರಿಟ್ಟಿದ್ದಾರೆ. ಇದೇ ಖುಷಿಯಲ್ಲಿ ಯಶ್ ರಿಯಾಳನ್ನ ಎತ್ತಿ ಮುದ್ದಾಡಿದ್ದಾರೆ.

short by: Pawanraj/read more at Filmibeat