Skip to main content


‘ಗುಹೆ ಸೇರುತ್ತಿವೆ ಕಾಂಗ್ರೆಸ್‌ ಹುಲಿಗಳು’

‘ಕಾಂಗ್ರೆಸ್‌ ವಿರುದ್ಧ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಶುರುವಾಗಿದ್ದು, ಸೋಲಿನ ಭೀತಿ ಎದುರಾಗಿದೆ. ಇದು ಅಮಿತ್ ಶಾ ಅವರನ್ನು ಕಂಡರೆ ಕಾಂಗ್ರೆಸ್‌ಗೆ ಭಯ. ಶಾ ಭೇಟಿ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಹುಲಿಗಳು ಗುಹೆ ಸೇರುತ್ತಿವೆ’ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್‌ ಹೇಳಿದರು.
‘ಚುನಾವಣಾ ತಾಲೀಮಿನಲ್ಲೇ ಭಯಭೀತರಾಗಿರುವ ಕಾಂಗ್ರೆಸ್‌ನವರು ಚುನಾವಣೆಗೆ ಮೊದಲೇ ಶಸ್ತ್ರ ಸನ್ಯಾಸ ಸ್ವೀಕರಿಸಲಿದ್ದಾರೆ’  ಎಂದು ಹೇಳಿದರು.

‘2004ರಲ್ಲಿ ಗಂಭೀರ ಎನಿಸಿದ ಕೋಮುಗಲಭೆಗಳಾಗಿದ್ದು, ಕಾಂಗ್ರೆಸ್ ಅವಧಿಯಲ್ಲೇ. ಸಚಿವ ರಮಾನಾಥ ರೈ ಗೃಹ ಸಚಿವರಾಗಿದ್ದಾಗ, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಗಲಭೆಗಳು ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಚಾರ ಮಾಡಿದ ಕಡೆಯಲೆಲ್ಲಾ ಕೋಮುಗಲಭೆಗಳಾಗಿವೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ಕುದ್ರೋಳಿ ದೇವಾಲಯದ ಕಾರ್ಯಕ್ರಮದಲ್ಲಿ ಅವರದೇ ಪಕ್ಷದ ಮುಖಂಡ ಜನಾರ್ದನ ಪೂಜಾರಿಯವರು ಕಾದು ಕುಳಿತರೂ ಅಲ್ಲಿಗೆ ಹೋಗಲಿಲ್ಲ, ಕಾಂಗ್ರೆಸ್‌ನ ಸಚಿವರು ಮೊದಲು ಮುಖ್ಯಮಂತ್ರಿಗೆ ಪಾಠ ಹೇಳಬೇಕು’ ಎಂದರು.

short by: Nishan Puthran/read more at Prajavani