Skip to main content


ವಿಷ್ಣು ದಾದ ಅವರ ಈ ಚಿತ್ರದ ಟೈಟಲ್ಲೇ ದರ್ಶನ್ ಅವರ ೫೧ನೇ ಚಿತ್ರದ ಟೈಟಲ್ ಆಗಲಿದೆ!

Short by: Shraman Jain

18 ವರ್ಷಗಳ ಹಿಂದೆ ವಿಷ್ಣು ದಾದ ಅಭಿನಯದ ಬ್ಲಾಕ್ಬಸ್ಟರ್ ಚಿತ್ರ 'ಯಜಮಾನ' ಬಿಡುಗಡೆಯಾಗಿತ್ತು. ಇವಗ್ಯಾಕೆ ಈ ವಿಷಯ ಅಂತ ಯೋಚಿಸ್ತಿದ್ದೀರಾ?! ಹೇಳ್ತೀವಿ ಕೇಳಿ.. ದರ್ಶನ್ ಅವರ ೫೧ನೇ ಚಿತ್ರ ಸೆಟ್ಟೇರಿರೊ ವಿಷಯ ನಿಮಗೆ ಗೊತ್ತಿರಬಹುದು. ಆದರೆ, ಚಿತ್ರತಂಡ, ಚಿತ್ರದ ಹೆಸರೇನು ಎಂದು ಬಿಟ್ಟುಕೊಟ್ಟಿರಲಿಲ್ಲ. ಈಗ, ದರ್ಶನ್ ಅವರ ೫೧ನೇ ಚಿತ್ರದ ಟೈಟಲ್ ರಿವೀಲ್ ಆಗಿದೆ. ಅದು "ಯಜಮಾನ". ವಿಷ್ಣುವರ್ಧನ್ ಅವರ ಜನಪ್ರಿಯ ಚಿತ್ರವೊಂದರ ಹೆಸರನ್ನೇ ದರ್ಶನ್ ಅವರ ಚಿತ್ರಕ್ಕೆ ಇಟ್ಟಿರುವುದು ವಿಶೇಷ. ಚಿತ್ರದ ಚಿತ್ರೀಕರಣ ಫೆ. 19ರಿಂದ ಆರಂಭವಾಗಲಿದೆ.

Read more at EeNadu India - Click Here

Comments