Skip to main content


ಒಳ್ಳೆ ಹುಡುಗ ಪ್ರಥಮ್ ಜೊತೆ ಡಿಂಚಾಕ್ ಪೂಜಾ!


ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರು ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿರುವ 'ಪ್ರಥಮ್ಸ್ ಬಿಲ್ಡಪ್' ಚಿತ್ರಕ್ಕೆ ನಾಯಕಿಯಾಗಿ, ತನ್ನ ಸ್ಟೈಲ್ ಆಫ್ ಸಿಂಗಿಂಗ್ ನಿಂದಲೇ ಫೇಮಸ್ ಆಗಿದ್ದ ಡಿಂಗ್ ಚಕ್ ಪೂಜಾ ಆಯ್ಕೆ ಆಗಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾರಂಗವನ್ನ ಪ್ರವೇಶ ಮಾಡಲಿರುವ ಅವರು, ಖುದ್ದಾಗಿ ಈ ವಿಚಾರವನ್ನ ಎಲ್ಲರಿಗೂ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ 'ಪ್ರಥಮ್ಸ್ ಬಿಲ್ಡಪ್' ಸಿನಿಮಾದಲ್ಲಿ ಒಂದು ಹಾಡನ್ನು ಹಾಡುವ ಸಾಧ್ಯತೆಗಳು ಇವೆಯಂತೆ. ಶಿವರಾಜ್ ಕುಮಾರ್ ಅವರಿಂದ 'ಪ್ರಥಮ್ಸ್ ಬಿಲ್ಡಪ್' ಸಿನಿಮಾದ ಶೀರ್ಷಿಕೆಯನ್ನ ಅನಾವರಣ ಮಾಡಿಸಿದ್ದ ಪ್ರಥಮ್ ಮುಂದಿನವಾರದಿಂದ ಶೂಟಿಂಗ್ ಆರಂಭಿಸಲು ಮುಂದಾಗಿದ್ದಾರೆ.

short by Shraman Jain/read more at Filmibeat Kannada