Skip to main content


ಗೂಗಲ್‌ ದುನಿಯಾದಲ್ಲಿ ರಾಜ್ಯ ಚುನಾವಣೆ ಹವಾ

ನಮ್ಮ ರಾಜ್ಯದ ವಿಧಾನಸಭೆ ಚುನಾವಣೆ ಅಖಾಡ ಕಾವೇರುತ್ತಿದ್ದಂತೆ 'ಗೂಗಲ್‌ ದುನಿಯಾ'ದಲ್ಲೂ ಬಿಸಿಯೇರುತ್ತಿದೆ. ಅಂದರೆ ರಾಜಕೀಯ ವಿಶ್ಲೇಷಕರು, ಚುನಾವಣಾಪೂರ್ವ ಸಮೀಕ್ಷೆ ನಡೆಸುವವರು, ದಕ್ಷಿಣ ಭಾರತದ ರಣಕಣದ ಬಗ್ಗೆ ಕುತೂಹಲ ಹೊಂದಿದವರು ಈ ಕುರಿತ ಮಾಹಿತಿ ಅಗೆದು ತೆಗೆಯಲು ಗೂಗಲ್‌ ಕೋಣೆ ಹೊಕ್ಕು ಕುಳಿತಿದ್ದಾರೆ!
ಗುಜರಾತ್‌ ಚುನಾವಣೆ ಬಳಿಕ ದೇಶದ ಚಿತ್ತ ಕರ್ನಾಟಕದತ್ತ ಹರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಕಣ ರಂಗೇರುತ್ತಿದೆ. ಇದರಿಂದಾಗಿ ರಾಜ್ಯದ ಚುನಾವಣೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಬಂದಿದೆ. ರಾಜ್ಯದ ರಾಜಕೀಯ ವಾತಾವರಣ, ಪ್ರಾದೇಶಿಕ ಭಿನ್ನತೆ, ಚುನಾವಣೆ ಮೇಲೆ ಪ್ರಭಾವ ಬೀರುವ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಹಲವರು ಆಸಕ್ತರಾಗಿದ್ದಾರೆ. ಈ ಪೈಕಿ ಹೆಚ್ಚಿನವರಿಗೆ ಗೂಗಲ್‌ ತಾಣವೇ ದರ್ಪಣವಾಗಿದೆ.

ಇನ್ನು ಕರ್ನಾಟಕ ಚುನಾವಣೆಯ ಬಗ್ಗೆ ದೇಶದ ಸಾಮಾನ್ಯ ಜನರಿಗೂ ಕೌತುಕವಿದೆ. ಮೊಬೈಲ್‌ ಉಪಯೋಗಿಸುವವರು ಇಂಟರ್‌ನೆಟ್‌ ಬಳಸುವ ಕಾಲ ಇದಾದ್ದರಿಂದ ಕರ್ನಾಟಕದ ರಾಜಕೀಯ ಸುದ್ದಿಯನ್ನು ನಾನಾ ಮಾಧ್ಯಮಗಳ ಮೂಲಕ ಪಡೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಇಂಥವರ ಹಸಿವು ನೀಗಿಸುವುದರಲ್ಲೂ ಗೂಗಲ್‌ ದಣಿಯುತ್ತಿದೆ.

short by: Nishan Puthran/read more at Vijaya Karnataka