Skip to main content


ಹೆಬ್ರಿ ನೂತನ ತಾಲ್ಲೂಕು ಲೋಕಾರ್ಪಣೆ

Short by: NISHAN PUTHRAN

ಹೆಬ್ರಿ ತಾಲ್ಲೂಕು ಉದ್ಘಾಟನೆ ಭಾಗ್ಯ ನನಗೆ ದೊರೆತಿರುವುದು ನನ್ನ ಸೌಭಾಗ್ಯ. ಶೀಘ್ರವಾಗಿ ಶಾಸಕರು ಪ್ರಸ್ತಾವನೆ ಕಳುಹಿಸಿದರೆ ಹೆಬ್ರಿ ತಾಲ್ಲೂಕು ಮಿನಿ ವಿಧಾನಸೌಧಕ್ಕೆ ₹ 5 ಕೋಟಿ ಮಂಜೂರು ಗೊಳಿಸುತ್ತೇನೆ. ಜಿಲ್ಲಾಧಿಕಾರಿಗೂ ಕೂಡಲೇ ಪ್ರಸ್ತಾವನೆ ಕಳುಹಿಸಲು ಸೂಚಿಸಿದ್ದೇನೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ತಾಲ್ಲೂಕು ಹೋರಾಟಕ್ಕೆ ಕೈಜೋಡಿಸಿದ ಸಮಿತಿ, ಸಂಘ ಸಂಸ್ಥೆಗಳು, ಸರ್ಕಾರ ಮತ್ತು ವೀರಪ್ಪ ಮೊಯಿಲಿ, ಗೋಪಾಲ ಭಂಡಾರಿ ಅವರಿಗೆ ಕೃತಜ್ಞತೆ ಸಲ್ಲಿಸಿ, ಪೂರ್ಣ ಆಡಳಿತ ಕೂಡಲೇ ಹೆಬ್ರಿ ತಾಲ್ಲೂಕಿಗೆ ದೊರೆಯಬೇಕು. ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುವುದನ್ನು ಸರ್ಕಾರ ನಿಲ್ಲಿಸಬೇಕು’ ಎಂದರು.

Read more at Prajavani

Comments