Skip to main content


ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ

ಮರಳು ಮಾಫಿಯಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹೊಸ ಮರಳು ನೀತಿ ಜಾರಿಗೆ ತರಲು ಮುಂ ದಾಗುತ್ತಿದೆ, ಈ ಮಧ್ಯೆ ಅಕ್ರಮ ಮರಳು ದಂಧೆಗಳು ಎಲ್ಲೆಡೆ ರಾಜಾರೋಷವಾಗಿ ನಡೆಯುತ್ತಿವೆ. ಅಕ್ರಮ ಮರಳು ಗಣಿ ಗಾರಿಕೆಯಿಂದಾಗಿ ನೇತ್ರಾವತಿ ಒಡಲು ಬರಿದಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ.
ಬಜತ್ತೂರು ಗ್ರಾಮದ ಬೆದ್ರೋಡಿ, ಮೊಗ್ರು ಗ್ರಾಮದ ಮುಗೇರಡ್ಕ ಪರಿಸರದಲ್ಲಿ ಹಗಲು ರಾತ್ರಿಯೆನ್ನದೆ ಮರಳು ಸಾಗಣೆ ನಡೆಯುತ್ತಿದೆ. ಒಂದೆಡೆ ಪರಿಸರದ ಸಂಪತ್ತು ಲೂಟಿಯಾಗುತ್ತಿದ್ದರೆ, ಮತ್ತೊಂದೆಡೆ ಅಕ್ರಮ ಮರಳುಗಾರಿಕೆ ವಾಹನದ ಭರಾಟೆಯಿಂದಾಗಿ ರಾತ್ರಿ ವೇಳೆ ನೆಮ್ಮದಿಗೂ ಭಂಗ ಉಂಟಾಗುತ್ತಿದೆ ಎಂಬ  ದೂರುಗಳು ಗ್ರಾಮಸ್ಥರಿಂದ ಕೇಳಿಬಂದಿವೆ.

ಮರಳುಗಾರಿಕೆ ನಡೆಸುತ್ತಿರುವ ಕೆಲ ಸಗಾರರನ್ನು ವಿಚಾರಿಸಿದರೆ ಅವರು ದಿನ ಕ್ಕೊಂದು ಸಬೂಬು ಹೇಳುತ್ತಿದ್ದಾರೆ. ‘ಒಮ್ಮೆ ನಮಗೆ ಸ್ವಂತಕ್ಕೆ ಎಂದರೆ, ಮತ್ತೊಮ್ಮೆ ಇದು ಪೊಲೀಸ್ ಒಬ್ಬರಿಗೆ, ಅವರು ಮನೆ ಕಟ್ಟುತ್ತಿ ದ್ದಾರೆ, ಇದು ಪೊಲೀಸರ ಜೀಪು’ ಎಂದು ಹೇಳುತ್ತಿದ್ದಾರೆ. ಇಲ್ಲಿ ಎಲ್ಲವೂ ನಿಗೂಢವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

short by NISHAN PUTHRAN/read more at Prajavani

Comments