Skip to main content


ಗೆದ್ದು ತೊಡೆ ತಟ್ಟಲು ರಾಜಕೀಯ ಕಬಡ್ಡಿ ಆಟವಲ್ಲ; ಜಗ್ಗೇಶ್‌ಗೆ ಪ್ರಕಾಶ್‌ ರೈ ತಿರುಗೇಟು

Short by: NISHAN PUTHRAN

ದೇಶ ಆಳುವ ಅರ್ಹತೆ ಕುರಿತು ಟ್ವಿಟರ್ ವೇದಿಕೆಯಲ್ಲಿ ನಟ ಜಗ್ಗೇಶ್‌ ಕೇಳಿದ್ದ ಪ್ರಶ್ನೆಗಳಿಗೆ ಪ್ರಕಾಶ್‌ ರೈ ಅದೇ ವೇದಿಕೆಯಲ್ಲಿ ಉತ್ತರಿಸಿದ್ದಾರೆ.

ಪ್ರಕಾಶ್‌ ರೈ ಅವರಿಗೆ ಇರುವ ರಾಜಕೀಯ ಅರ್ಹತೆ, ಇಲಾಖೆಗಳ ಮಾಹಿತಿ, ಪ್ರಧಾನಿ ಮೋದಿ ಬಗೆಗಿನ ವಿರೋಧಿ ಧೋರಣೆ ಕುರಿತು ಪ್ರಸ್ತಾಪಿಸಿ ‘ನಿಲ್ಲಿ ಚುನಾವಣೆಗೆ ತಟ್ಟಿತೋಡೆ ಅದು ಗಂಡಸ್ಸುತನ! ಯಾಕೆ ಚುನಾವಣೆ ಹೊಸ್ತಿಲಲ್ಲಿ ಈ ಡ್ರಾಮಾಕಂಪನಿ!’ ಎಂದು ಜಗ್ಗೇಶ್‌ ಟೀಕಿಸಿದ್ದರು.

‘ಕೋಮುವಾದವನ್ನು ಖಂಡಿಸುವುದಕ್ಕೆ, ಸೊಂಟದ ಕೆಳಗಿನ ಅಸಭ್ಯ ಮಾತನಾಡುವ ನಿಮ್ಮ ಪಕ್ಷದ ಸದಸ್ಯರನ್ನ, ಇಂಥಹ ನಾಯಕರನ್ನು ಕಾಪಾಡುವ ನಿಮ್ಮ ಪಕ್ಷವನ್ನು ಹಾಗೂ ನಾಯಕರನ್ನು ಪ್ರಶ್ನಿಸಲು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಮಾನವೀಯ ಹೃದಯವೊಂದಿದ್ದರೆ ಸಾಕು. ಇನ್ನು ಯಾವುದೇ ಅರ್ಹತೆಗಳೂ ಬೇಕಿಲ್ಲ’ ಎಂದು ಪ್ರಕಾಶ್‌ ರೈ ಟ್ವೀಟಿಸಿದ್ದಾರೆ.

Read more at Prajavani

Comments