Skip to main content


ಫಿಕ್ಸ್ ಆಯ್ತು ಕಿಚ್ಚನ ಕೋಟಿಗೊಬ್ಬ-3 ಚಿತ್ರದ ರಿಲೀಸ್ ಡೇಟ್!


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕ ನಟನಾಗಿ ನಟಿಸುತ್ತಿರುವ "ಕೋಟಿಗೊಬ್ಬ 3" ಚಿತ್ರದ ಮುಹೂರ್ತ ಮಾರ್ಚ್ 2ರಂದು ನಡೆಯಲಿದೆ ಎಂದು ಈ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ಘೋಷಿಸಿದ್ದರು. ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಕೂಡ ಅವರು ನಿರ್ಧರಿಸಿ ಘೋಷಿಸಿದ್ದಾರೆ. ಈ ವರ್ಷದ ಕೊನೆಗೆ, ಅಂದರೆ ಕ್ರಿಸ್ ಮಸ್ ವಾರಕ್ಕೆ "ಕೋಟಿಗೊಬ್ಬ 3" ಬಿಡುಗಡೆಯಾಗಲಿದೆ. ಶಿವ ಕಾರ್ತಿಕ್ ನಿರ್ದೇಶನದ "ಕೋಟಿಗೊಬ್ಬ 3" ಚಿತ್ರದಲ್ಲಿ ಬಹುತಾರಾಗಣವಿದ್ದು ಸಕಲ ಸಿದ್ಧತೆ ಕಾರ್ಯ ನಡೆಯುತ್ತಿದೆ.

short by Shraman Jain/read more at Filmibeat Kannada