Skip to main content


ತನ್ನ ಲಿಪ್ ಲಾಕ್ ದೃಶ್ಯದ ಹಿಂದಿನ ಸತ್ಯವನ್ನು ಬಹಿರಂಗಗೊಳಿಸಿದ ಹರಿಪ್ರಿಯಾ

ಹರಿಪ್ರಿಯಾ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಹನ್ನೊಂದು ವರ್ಷಗಳನ್ನು ಪೂರೈಸಿದ್ದು ಈ ಹಿನ್ನಲೆಯಲ್ಲಿ ಆರ್ ಜೆ ಮಯೂರ್ ರಾಘವೇಂದ್ರ ನಡೆಸಿಕೊಡುವ ಸಿನಿಮಾ ಸೂತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಹನ್ನೊಂದು ವರ್ಷಗಳ ಸಿನಿ ಜೇವನದ ಅನುಭವಗಳನ್ನು ಹಂಚಿಕೊಂಡರು.ಈ ವೇಳೆ ತಮ್ಮ ಮೊದಲ ಚಿತ್ರದಲ್ಲಿ ತಾವು ನಟಿಸಿದ ಲಿಪ್ ಲಾಕ್ ಧೃಶ್ಯದ ಬಗ್ಗೆಯೂ ಮಾತನಾಡಿದ್ದಾರೆ.

ಅನೇಕ ಭಾಷೆಗಳಲ್ಲಿ ನಟಿಸಿರುವ ನಟಿ ಹರಿಪ್ರಿಯಾ ಮೊದಲು ನಟಿಸಿದ ಚಿತ್ರ ತುಳುಭಾಷೆಯದ್ದಂತೆ.
ಆ ಚಿತ್ರದ ಒಂದು ಹಾಡಿನ ದೃಶ್ಯಕ್ಕಾಗಿ ನಿರ್ದೇಶಕರು ನಾಯಕನೊಂದಿಗೆ ಲಿಪ್’ಲಾಕ್ ಮಾಡಬೇಕೆಂದು ಹರಿಪ್ರಿಯಾಗೆ ತಿಳಿಸಿದ್ದರಂತೆ. “ನಾನು ಲಿಪ್ ಲಾಕ್ ಮಾಡಲು ಒಪ್ಪದೇ ಇದ್ದರೂ ಬಲವಂತದಿಂದ ಆ ದೃಶ್ಯವನ್ನು ನನ್ನ ಕೈಯಿಂದ ಮಾಡಿಸಲಾಯಿತು, ಆಗ ನನಗೆ 16 ವರ್ಷ ವಯಸ್ಸಾಗಿತ್ತು ” ಎಂದು ಹರಿಪ್ರಿಯಾ ಹೇಳಿದ್ದಾರೆ.

ತಾನು ನಟಿಸಿದ ಆ ತುಳು ಚಿತ್ರ ಯಾವುದು ಮತ್ತು ತನ್ನಿಂದ ಲಿಪ್ಲಾಕ್ ಮಾಡಿಸಿದ ಆ ನಿರ್ದೇಶಕ ಯಾರು ಎಂಬುದರ ಬಗ್ಗೆ ಮಾತ್ರ ಹರಿಪ್ರಿಯಾ ಗುಟ್ಟು ಬಿಟ್ಟುಕೊಡಲಿಲ್ಲ. ಇದೆ ತಮ್ಮ ಮೂಲ ಹೆಸರು ಹರಿಪ್ರಿಯಾ ಅಲ್ಲ ಬದಲಾಗಿ ಶ್ರುತಿ ಎಂಬ ಸೀಕ್ರೆಟ್ ಅನ್ನೂ ಕೂಡ ಹರಿಪ್ರಿಯಾ ಸಿನಿಮಾ ಸೂತ್ರ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದರು.
  
short by: Pawanraj/ read more at Arali Katte