Skip to main content


ಬಾಹುಬಲಿಗೆ ಅಭ್ಯಂಜನದ ಕ್ಷಣ

Short by: NISHAN PUTHRAN

ವಿಂಧ್ಯಗಿರಿಯ ಮಹಾವಂದ್ಯ, ಜಿನಧರ್ಮದ ಕೀರ್ತಿಕಲಶ, ಶ್ರವಣಬೆಳಗೊಳದ ಬಾಹುಬಲಿಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ವಿಧಿವಿಧಾನಗಳು ಆರಂಭಗೊಂಡಿದ್ದು, ಆ ಮಹಾಮಜ್ಜನಕ್ಕೆ ಕ್ಷಣಗಣನೆ ಶುರುವಾಗಿದೆ. ಹಿರಿಯ ಜೈನ ಮುನಿಗಳು, ಶ್ರಾವಕ, ಶ್ರಾವಕಿಯರು, ದೇಶದ ನಾನಾ ಕಡೆಗಳಿಂದ ಬಂದ ಆಸ್ತಿಕರು ಮತ್ತು ಶ್ರೀಸಾಮಾನ್ಯರ ಇದಕ್ಕೆ ಸಾಕ್ಷಿಯಾಗಲಿದ್ದಾರೆ. ನೆತ್ತಿಯಿಂದ ಪಾದದ ಉಂಗುಷ್ಠದವರೆಗೆ ಹಾಲು, ಗಂಧ, ಚಂದನಗಳಲ್ಲಿ ಮುಳುಗೇಳಲಿರುವ ಕೇವಲಜ್ಞಾನಮೂರ್ತಿ ಗೊಮ್ಮಟೇಶ್ವರನಿಗೆ ಈ ಮಾಸವಿಡೀ ನಡೆಯುವ ಅಭಿಷೇಕದ ಕೊನೆಗೆ ರಾಜಕುಮರ ಅಲಂಕಾರ ಹಾಗೂ ಮಹಾರತಿಯೂ ನಡೆಯಲಿದೆ. 

Read more at Vijaya Karnataka - Click Here

Comments