Skip to main content


ಮತಧರ್ಮಗಳಿಂದ ಕರ್ತವ್ಯದೆಡೆ ಮುಖ ಮಾಡಿ

ಪ್ರೀತಿ, ಪ್ರೇಮ, ಆರೋಗ್ಯ, ಖುಷಿ, ನೆಮ್ಮದಿ ಮನುಷ್ಯನ ಮೂಲಭೂತ ವಿಚಾರಗಳು. ಅವುಗಳನ್ನು ಪಡೆಯಬೇಕಾದರೆ ಮತಧರ್ಮಗಳ ವಿಚಾರಕ್ಕಿಂತ ಹೆಚ್ಚಾಗಿ ನಮ್ಮ ಕರ್ತವ್ಯಗಳತ್ತ ಮುಖ ಮಾಡಬೇಕು. ಅಂತರಂಗದ ಶೋಧನೆ ಮಾಡಿಕೊಳ್ಳಬೇಕು ಎಂದು ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಹೇಳಿದರು.
ಕರ್ಣಾಟಕ ಬ್ಯಾಂಕ್‌ನ ಸಂಸ್ಥಾಪಕರ ದಿನಾಚರಣೆ ಸಂದರ್ಭ ಭಾನುವಾರ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ಲೈಫ್‌ ಆಡಿಟ್‌’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಭಾರತೀಯ ತತ್ವಶಾಸ್ತ್ರದ ಕೆಲವೇ ಸಾಲುಗಳನ್ನು ಅಲ್ಲಲ್ಲಿ ಉಲ್ಲೇಖಿಸುತ್ತ ಲಘು ದಾಟಿಯಲ್ಲಿ ತರ್ಕಬದ್ಧವಾಗಿ ಮಾತನಾಡಿದ ಅವರು, ‘ರಿಲಿಜನ್‌ಗಿಂತ ರೆಸ್ಪಾನ್ಸಿಬಿಲಿಟಿ ಮುಖ್ಯ’ ಎಂದು ಪ್ರತಿಪಾದಿಸಿದರು.

ವಿದುಷಿ ರಂಜನಿ ಮತ್ತು ವಿದುಷಿ ಗಾಯತ್ರಿ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್‌ನಲ್ಲಿ ವಿದ್ವಾನ್‌ ಮೈಸೂರು ಎಚ್‌. ಎನ್‌. ಭಾಸ್ಕರ್‌, ಮೃದಂಗದಲ್ಲಿ ವಿದ್ವಾನ್‌ ಡೆಲ್ಲಿ ಸಾಯಿರಾಮ್‌, ಘಟಂನಲ್ಲಿ ವಿದ್ವಾನ್‌ ಜಿ. ಚಂದ್ರಶೇಖರ ಶರ್ಮ ಸಹಕರಿಸಿದರು.

short by: Nishan Puthran/read more at Prajavani