Skip to main content


‘ಯಕ್ಷಗಾನ ರಾಜ್ಯದ ಅಧಿಕೃತ ಕಲೆಯಾಗಲಿ’

ಕಾನೂನು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಯಕ್ಷಗಾನ ಕಲಿಯುವುದರಿಂದ ವಾದ, ತರ್ಕವನ್ನು ವಿಕಾಸಗೊಳಿಸಲು ಅನುಕೂಲವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆರಂಭವಾದ ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ 2018’ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಕಲೆ ಯಕ್ಷಗಾನ. ಕೇರಳ ಸರ್ಕಾರ ಕಥಕ್ಕಳಿಯನ್ನು ರಾಜ್ಯದ ಅಧಿಕೃತ ಕಲೆಯನ್ನಾಗಿ ಘೋಷಿಸಿದಂತೆ ಕರ್ನಾಟಕ ಸರ್ಕಾರವೂ ಯಕ್ಷಗಾನವನ್ನು ನಮ್ಮ ರಾಜ್ಯದ ಅಧಿಕೃತ ಕಲೆಯನ್ನಾಗಿ ಘೋಷಣೆ ಮಾಡಬೇಕು. ಆ ಮೂಲಕ ಪರಂಪರಾಗತ ಯಕ್ಷಗಾನ ಕಲೆಗೆ ಮನ್ನಣೆ ನೀಡಬೇಕು ಎಂದರು.ಯುವ ಸಮುದಾಯದಲ್ಲಿ ಈ ಕಲೆ ಬಗ್ಗೆ ಇನ್ನಷ್ಟು ಆಸಕ್ತಿ ಮೂಡುವಂತಾಗಲು ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಇಂತಹಾ ಸ್ಪರ್ಧೆ ಆಯೋಜಿಸಿರುವುದು ಅತ್ಯಂತ ಪ್ರಸ್ತುತವಾದುದು ಎಂದರು.

short by NISHAN PUTHRAN/read more at Prajavani

Comments