Skip to main content


ವಿಧಾನಸಭೆ ಸಚಿವಾಲಯದ 151 ಹುದ್ದೆಗಳ ನೇಮಕಾತಿಗಾಗಿ ನಡೆದ ಸಂದರ್ಶನ ಪ್ರಕ್ರಿಯೆಯಲ್ಲೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ

ಅಭ್ಯರ್ಥಿಗಳ ಸಂದರ್ಶನಕ್ಕೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಂದರ್ಶನ ಸಮಿತಿ ರಚಿಸದೇ ಸೆಕ್ಷನ್ ಅಧಿಕಾರಿ, ಅಧೀನ ಕಾರ್ಯದರ್ಶಿ ಮತ್ತು ಕಂಪ್ಯೂಟರ್ ಆಪರೇಟರ್‌ಗಳನ್ನು ಬಳಸಿಕೊಂಡು ‘ಸಂದರ್ಶನ ಶಾಸ್ತ್ರ’ ಮುಗಿಸಿ ಪಟ್ಟಿ ತಯಾರಿಸಲಾಗಿದೆ. ಸಂದರ್ಶನ ಸಮಿತಿಯಲ್ಲಿರುವ ಕೆಲವರ ವಿದ್ಯಾರ್ಹತೆ ಕಾನೂನು ಪದವಿ ಆಗಿದ್ದರೆ, ಕೆಲವರದ್ದು ಎಸ್‌ಎಸ್‌ಎಲ್‌ಸಿ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 

‘ವಿಧಾನಸೌಧ ಸಚಿವಾಲಯದ ನೇಮಕಾತಿಗೂ ನಮಗೂ ಸಂಬಂಧವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರದಂದು ಪ್ರತಿಕ್ರಿಯಿಸಿದರು. ವಿಧಾನಸೌಧ ಸಚಿವಾಲಯ ನೇಮಕದಲ್ಲಿ ಸ್ವಜನಪಕ್ಷಪಾತ ಆರೋಪದ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಾಗೇನೂ ಇಲ್ಲ. ಅಲ್ಲಿ ಪ್ರತ್ಯೇಕ ಕಾರ್ಯದರ್ಶಿಗಳು ಇರುತ್ತಾರೆ’ ಎಂದರು.     

short by: NP / read more at Prajavani

Comments