Skip to main content


ಉಡುಪಿಗೆ ರಾಹುಲ್ ಬರುವುದು ಬೇಡ ಎಂದರಂತೆ ಪ್ರಮೋದ್, ಪೂಜಾರಿ! ನ್ಯೂಸ್ 18 ವರದಿ

ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಕಾಂಗ್ರೆಸ್ ಪ್ರಚಾರಕ್ಕಾಗಿ ಬರುತ್ತಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಉಡುಪಿ ಜಿಲ್ಲೆಗೆ ಸ್ವಾಗತಿಸಲು ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಬೈಂದೂರು ಶಾಸಕ ಗೋಪಾಲ ಪೂಜಾರಿ ನಿರಾಕರಿಸಿದ್ದಾರೆ ಎಂಬ ಕುರಿತು ನ್ಯೂಸ್ 18 ಇಂಗ್ಲೀಷ್ ಮಾಧ್ಯಮ ವಿಸ್ತೃತ ವರದಿ ಪ್ರಕಟಿಸಿದೆ.

ಕಾಂಗ್ರೆಸ್ ಶಾಸಕ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಜಾರಿಯಲ್ಲಿರುವಾಗಲೆ ನ್ಯೂಸ್ 18 ಪ್ರಕಟಿಸಿರುವ ಈ ವರದಿ ಸಂಚಲನ ಸೃಷ್ಟಿಸಿದೆ. ಆದರೆ ಪ್ರಮೋದ್ ಮಧ್ವರಾಜ್ ಮತ್ತು ಗೋಪಾಲ ಪೂಜಾರಿ ಇಬ್ಬರೂ ಸಹ ನ್ಯೂಸ್ 18 ವರದಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.        

short by: NP / read more at Karavalikarnataka.com

Comments