Skip to main content


ಆಪ್ತಮಿತ್ರ 2 ಚಿತ್ರಕ್ಕೆ ರವಿಚಂದ್ರನ್ ಹೀರೋ

ಹದಿಮೂರು ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ ‘ಆಪ್ತಮಿತ್ರ’ ರೀತಿಯೇ ‘ಆಪ್ತಮಿತ್ರ 2’ ಸಿನಿಮಾ ಬರಲಿದೆಯಂತೆ. ‘ಆಪ್ತಮಿತ್ರ’ ನಂತರ ‘ಆಪ್ತರಕ್ಷಕ’ ಸಿನಿಮಾ ಬಂದ್ದಿತ್ತು. ಆದರೆ ಈ ಚಿತ್ರದ ನಂತರ ಇದೀಗ ‘ಆಪ್ತಮಿತ್ರ 2’ ಎಂಬ ಹೆಸರಿನಲ್ಲಿ ಹೊಸ ಸಿನಿಮಾ  ಶುರುವಾಗುತ್ತಿದೆ.
‘ಆಪ್ತಮಿತ್ರ’ ಚಿತ್ರವನ್ನು ನಿರ್ದೇಶಕ ಮಾಡಿದ್ದ ಪಿ.ವಾಸು ಅವರೇ ಈಗ ‘ಆಪ್ತಮಿತ್ರ 2’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರಂತೆ. ‘ಶಿವಲಿಂಗ’ ನಂತರ ‘ಆಪ್ತಮಿತ್ರ 2’ ಸಿನಿಮಾವನ್ನು ವಾಸು ಕೈಗೆತ್ತಿಕೊಂಡಿದ್ದಾರೆ. ‘ಆಪ್ತಮಿತ್ರ’ ಸಿನಿಮಾದಲ್ಲಿ ವಿಷ್ಣುವರ್ಧನ್ ನಾಯಕನಾಗಿದ್ದರು. ಆದರೆ ‘ಆಪ್ತಮಿತ್ರ 2’ ಚಿತ್ರಕ್ಕೆ ನಟ ರವಿಚಂದ್ರನ್ ನಾಯಕ ಎಂಬ ಮಾತುಗಳು ಸದ್ಯ ಕೇಳಿ ಬಂದಿದೆ. ವಿಷ್ಣುವರ್ಧನ್ ಅವರ ಜಾಗಕ್ಕೆ ಸರಿಯಾದ ವ್ಯಕ್ತಿ ರವಿಚಂದ್ರನ್ ಎಂದು ಪಿ.ವಾಸು ಅವರನ್ನು ಆಯ್ಕೆ ಮಾಡಿದ್ದಾರಂತೆ.        
Short by: PAWANRAJ / read more at Troll Anthammas