Skip to main content


2019ರ ಲೋಕಸಭಾ ಚುನಾವಣೆ: ಬಿಜೆಪಿ ರಣತಂತ್ರ

ಬಿಜೆಪಿಯ ಎಲ್ಲ ಸಂಸದರೂ ಫೇಸ್‍ಬುಕ್ ಪೇಜ್ ಹೊಂದಿರಬೇಕು.ಆ ಪೇಜ್‍ಗೆ ಕನಿಷ್ಠ ಮೂರು ಲಕ್ಷ ಲೈಕ್ ಇರಬೇಕು. ಸಂಸದರು ಈ ಗುರಿ ಮುಟ್ಟಿದರೆ, ಅವರ ಚುನಾವಣಾ ಕ್ಷೇತ್ರದಲ್ಲಿನ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕರೆ ಮಾಡಿ ಮಾತನಾಡಲಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಂಸದರಿಗೆ ಕರೆ ನೀಡಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ್ ರಸ್ತೆಯಲ್ಲಿರುವ ಬಿಜೆಪಿಯ ಹೊಸ ಕಚೇರಿಯಲ್ಲಿ ಮಾರ್ಚ್ 23ರಂದು ಸಂಸದರ ಸಭೆ ಕರೆಯಲಾಗಿತ್ತು. 2019ರ ಚುನಾವಣೆಯ ಸಿದ್ಧತೆ ಮತ್ತು ಕಾರ್ಯತಂತ್ರದ ಬಗ್ಗೆ ಇಲ್ಲಿ ಚರ್ಚಿಸಲಾಗಿತ್ತು.

ಮುಂಬರುವ  ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಮುಖ ಪಾತ್ರವಹಿಸಲಿವೆ. ಈ ವೇಳೆ ಮಾರ್ಕೆಟಿಂಗ್ ಕಂಪನಿಗಳಿಂದ ಲೈಕ್ ಖರೀದಿಸಬಾರದು ಎಂದು ಪಕ್ಷ ತಮ್ಮ ಸಂಸದರಿಗೆ ತಾಕೀತು ನೀಡಿತ್ತು. ಬಿಜೆಪಿಯ 43 ಸಂಸದರಿಗೆ ಫೇಸ್‍ಬುಕ್ ಪೇಜ್ ಇಲ್ಲ, ಫೇಸ್‍ಬುಕ್ ಪೇಜ್ ಹೊಂದಿರುವ 77 ಸಂಸದರ ಈ ಪೇಜ್‍ಗಳು ವೆರಿಫೈಡ್ ಆಗಿಲ್ಲ. ಅದೇ ವೇಳೆ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪುವಂತೆ ಮಾಡಬೇಕು. ವಿಪಕ್ಷಗಳ ಸುಳ್ಳು ಸುದ್ದಿಗೆ ಲಗಾಮು ಹಾಕಬೇಕು. ಇದಕ್ಕೆಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬೇಕೆಂದು ಆ ಸಭೆಯಲ್ಲಿ ಮೋದಿ ಹೇಳಿದ್ದರು.          

short by NP / read more at Prajavani

Comments