Skip to main content


ಮೊದಲ ದಿನವೇ 25.10 ಕೋಟಿ ಗಳಿಸಿದ ಬಾಘಿ-2, 2018ರ ಉತ್ತಮ ಆರಂಭ ಕಂಡ ಮೊದಲ ಚಿತ್ರ

ನಟ ಟೈಗರ್ ಶ್ರಾಫ್ ಅಭಿನಯದ ಬಾಘಿ-2 ಚಿತ್ರ ನಿರೀಕ್ಷೆಯಂತೆಯೇ ಉತ್ತಮ ಆರಂಭ ಕಂಡಿದ್ದು, ತೆರೆಕಂಡ ಮೊದಲ ದಿನವೇ 25.10 ಕೋಟಿ ಗಳಿಗೆ ಮಾಡಿದೆ.

ಆ ಮೂಲಕ ಉತ್ತಮ ಗಳಿಕೆ ಕಂಡ 2018ರ ಮೊದಲ ಚಿತ್ರ ಎಂಬ ಖ್ಯಾತಿಗೂ ಬಾಘಿ-2 ಭಾಜನವಾಗಿದೆ. 2016ರಲ್ಲಿ ತೆರೆಗೆ ಬಂದಿದ್ದ ಬಾಘಿ ಚಿತ್ರದ ಸೀಕ್ವಲ್ ಬಾಘಿ-2 ಆಗಿದ್ದು, ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಳನಮ ಮಾಡಿದ್ದಾರೆ.

ಪ್ರಸ್ತುತ ಬಾಲಿವುಡ್ ನಲ್ಲಿ ಹಾಟ್ ಜೋಡಿ ಎಂದು ಕರೆಸಿಕೊಳ್ಳುತ್ತಿರುವ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಚಿತ್ರದ ನಾಯಕ ನಾಯಕಿಯಾಗಿದ್ದು, ಚಿತ್ರದಲ್ಲಿ ನಟ ಮನೋಜ್ ಬಾಜ್ಪಾಯ್, ರಣದೀಪ್ ಹೂಡ, ಪ್ರತೀಕ್ ಬಬ್ಬರ್ ಮತ್ತು ದೀಪಕ್ ದೊಬ್ರಿಯಲ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

short by Pawan / read more at Kannada Prabha

Comments