Skip to main content


ಮಾರ್ಚ್ 27ಕ್ಕೆ ಭಾರತಕ್ಕೆ ಬರಲಿದೆಯಾ ಐಫೋನ್ X ರೂಪದ ವಿವೋ ವಿ9?

ವಿವೋ ಸಂಸ್ಥೆಯು ತಾನು ಲಾಂಚ್ ಮಾಡಲಿರುವ ಮೊಬೈಲ್ ನ ಹೆಸರನ್ನು ಬಹಿರಂಗಪಡಿಸಿಲ್ಲವಾದರೂ ಅದು ವಿವೋ ವಿ9 ಆಗಿರಬಹುದೆಂಬ ಊಹಾಪೋಹಗಳಿವೆ. ಅದು ರೂ 18990/- ಬೆಲೆಯ ವಿವೋ ವಿ7 ನ ಸೀಕ್ವೆಲ್ ಆಗಿರಲಿದೆ. IANS ನ ವರದಿಗಳ ಅನುಸಾರ ವಿವೋ ನ ಈ ನೂತನ ಸ್ಮಾರ್ಟ್ಫೋನ್ ನಲ್ಲಿ ಐಫೋನ್ X ಮಾದರಿಯ 'ನಾಚ್' ಒಂದು ಇರಲಿದೆ. ಅಲ್ಲದೆ ವಿವೋ ನ ಈ ಹೊಸ ಸ್ಮಾರ್ಟ್ಫೋನ್ ನ ಬೆಲೆ ಅಂದಾಜು ರೂ 25000 ಆಗಿರಲಿದೆ ಎನ್ನುವ ವದಂತಿಗಳಿವೆ.
ವಿವೋ ವಿ9 ಬಗ್ಗೆ ಹೇಳುವುದಾದರೆ , ಈ ಸ್ಮಾರ್ಟ್ಫೋನ್ ನ ಹಲವಾರು ಮಾಹಿತಿಗಳು ಈಗಾಗಲೇ ಸೋರಿಕೆಯಾಗಿದೆ ಮತ್ತು ಈ ಕುರಿತು ಸಾಕಷ್ಟು ವದಂತಿಗಳೂ ಕೇಳಿಬಂದಿದೆ. ಇತ್ತೀಚೆಗೆ ಸೋರಿಕೆಯಾದ ವಿವೋ ವಿ9 ನ ಚಿತ್ರಗಳಲ್ಲಿ ಐಫೋನ್ X ಮಾದರಿಯ ನಾಚ್ ಮತ್ತು ಡ್ಯುಯಲ್ ಕ್ಯಾಮೆರಾ ಸೆಟಪ್ ಗಳನ್ನು ಕಾಣಬಹುದಾಗಿದೆ.
short by: SP / read more at Gizbot