Skip to main content


ನೂತನ ರೆಡ್‌ಮಿ 5 ಸ್ಮಾರ್ಟ್‌ಫೋನ್!!

ಮೊಬೈಲ್ ದುನಿಯಾದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿಲಿರುವ ಶಿಯೋಮಿ. ಚೀನಾ ಮೂಲದ ಶಿಯೋಮಿ, ಬಜೆಟ್ ಬೆಲೆಯಲ್ಲಿ ಟಾಪ್ ಎಂಡ್ ವಿಶೇಷತೆಗಳಿರುವ ರೆಡ್‌ಮಿ 5 ಅನ್ನು ಭಾರತೀಯ ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಎಲ್ಲಾ ವಿಭಾಗದಲ್ಲಿಯೂ ತನ್ನದೇ ಸ್ಮಾರ್ಟ್‌ಫೋನ್‌ಗಳ ಅಬ್ಬರ ಇರುವಂತೆ ನೋಡಿಕೊಂಡಿದೆ.
ಮಾರ್ಚ್ 14 ರಂದು ಲಾಂಚ್ ಆದ ರೆಡ್‌ಮಿ 5 ಸ್ಮಾರ್ಟ್‌ಫೋನ್ ಎಲ್ಲಾ ವಿಧದಲ್ಲಿಯೂ ಬೆಸ್ಟ್ ಎನ್ನಬಹುದಾಗಿದ್ದು, ವೇಗದ ಪ್ರೋಸೆಸರ್, ಉತ್ತಮ ಕ್ಯಾಮೆರಾ, ಹೊಸ ಮಾದರಿಯ ವಿನ್ಯಾಸ, ಫುಲ್‌ ಸ್ಕ್ರಿನ್ ಡಿಸ್‌ಪ್ಲೇ, ದೊಡ್ಡ ಬ್ಯಾಟರಿ ಸೇರಿದಂತೆ ಟಾಪ್ ವಿಶೇಷತೆಗಳನ್ನು ಒಳಗೊಂಡಿದ್ದು, ಬಜೆಟ್ ಬೆಲೆಯಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ.
short by: SP / read more at Gizbot