Skip to main content


ಮಹಿಳೆಯರನ್ನು ಆಕರ್ಷಿಸ್ತಿದೆ 7 ಲಕ್ಷದ ಈ ಸೆಕ್ಸ್ ರೋಬೋಟ್!

ಸೆಕ್ಸ್ ಗೊಂಬೆಗಳ ಬಗ್ಗೆ ಈಗಾಗಲೇ ಕೇಳಿದ್ದೇವೆ. ಈಗ ಸೆಕ್ಸ್ ರೋಬೋಟ್ ಸರದಿ. ಮಹಿಳೆಯರ ಅಗತ್ಯತೆಯನ್ನು ಗಮನಿಸಿ ಪ್ರಪಂಚದ ಮೊದಲ ಸೆಕ್ಸ್ ರೋಬೋಟ್ ತಯಾರಿಸಲಾಗಿದೆ. 8 ಸಾವಿರ ಪೌಂಡ್ ಅಂದ್ರೆ ಸುಮಾರು 7 ಲಕ್ಷ 34 ಸಾವಿರ ರೂಪಾಯಿ ಬೆಲೆಯ ಈ ಸೆಕ್ಸ್ ರೋಬೋಟ್ ಹೆಸರು ಹೆನ್ರಿ. ಕೇವಲ ಸಂಭೋಗದ ಸುಖವನ್ನು ಮಾತ್ರ ಈ ಸೆಕ್ಸ್ ರೋಬೋಟ್ ನೀಡುತ್ತಿಲ್ಲ. ಬದಲಾಗಿ ಸೆನ್ಸ್ ಆಫ್ ಹ್ಯೂಮರ್ ಹೊಂದಿರುವ ರೋಬೋಟ್ ಜೋಕ್ ಮಾಡಿ ನಿಮ್ಮನ್ನು ನಗಿಸಲಿದೆ. ರೋಬೋಟ್ 6 ಅಡಿ ಎತ್ತರ ಹೊಂದಿದೆ.ಇದ್ರ ಸಿಕ್ಸ್ ಪ್ಯಾಕ್ ಹಾಗೂ ಗಾಢ ಬಣ್ಣ ಮಹಿಳೆಯರನ್ನು ಆಕರ್ಷಿಸಲಿದೆ.

ಇದು ಮನೆಗೆ ಬರುವ ಮಹಿಳೆಯನ್ನು ಸ್ವಾಗತಿಸಿ ಆಕೆಯ ಇಷ್ಟದ ಧಾರಾವಾಹಿ, ಚಲನಚಿತ್ರಗಳ ಬಗ್ಗೆ ಮಾತನಾಡುತ್ತದೆ. ನೆಚ್ಚಿನ ಪುಸ್ತಕ, ಪ್ರೇಮಗೀತೆಗಳನ್ನು ಹೇಳಿ ಪ್ರೀತಿ ವ್ಯಕ್ತಪಡಿಸುತ್ತದೆ. 7 ಲಕ್ಷ 34 ಸಾವಿರದ ಈ ರೋಬೋಟ್ 10 ಲಕ್ಷದ 9 ಸಾವಿರಕ್ಕೆ ಮಾರಾಟವಾಗಿದೆ.

ಇದು ಕಸ್ಟಮ್ ಮೇಡ್ ಆಗಿದ್ದು, ಆರ್ಡರ್ ನೀಡುವ ವ್ಯಕ್ತಿ ತನಗೆ ಬೇಕಾದಂತೆ ರೋಬೋಟ್ ರಚಿಸಿಕೊಳ್ಳಬಹುದಾಗಿದೆ. ಸೆಕ್ಸ್ ಡಾಲ್ ಗಳಿಗೆ ಈಗಾಗಲೇ ಬೇಡಿಕೆಯಿದೆ. ಈಗ ಸೆಕ್ಸ್ ರೋಬೋಟ್ ಅಬ್ಬರ ಶುರುವಾದ್ರೆ ಮನುಷ್ಯರ ಸಂಬಂಧ ಹಾಳಾಗುವ ಸಾಧ್ಯತೆಯಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

short by Nithin / read more at ಕನ್ನಡದುನಿಯಾ

Comments