Skip to main content


ಏರ್‌ ಇಂಡಿಯಾ: ಶೇ 76ರಷ್ಟು ಪಾಲು ಮಾರಾಟಕ್ಕೆ ನಿರ್ಧಾರ

ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್‌ ಇಂಡಿಯಾದಲ್ಲಿನ (ಎ.ಐ) ತನ್ನ ಶೇ 76ರಷ್ಟು ಪಾಲು ಬಂಡವಾಳವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಷೇರು ವಿಕ್ರಯ ಕುರಿತು ಬುಧವಾರ ಬಿಡುಗಡೆ ಮಾಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ನಷ್ಟಪೀಡಿತ ‘ಎಐ’ ಮತ್ತು ಅದರ ಎರಡು ಅಂಗಸಂಸ್ಥೆಗಳಲ್ಲಿನ ಸರ್ಕಾರದ ಪಾಲನ್ನು ಮಾರಾಟ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ.

ಪಾಲು ಬಂಡವಾಳ ಮಾರಾಟದ ಜತೆಗೆ ಆಡಳಿತ ನಿಯಂತ್ರಣವನ್ನು ವರ್ಗಾಯಿಸಲೂ ಸರ್ಕಾರ ನಿರ್ಧರಿಸಿದೆ.  ಅರ್ನಸ್ಟ್‌ ಆ್ಯಂಡ್‌ ಯಂಗ್‌ ಎಲ್‌ಎಲ್‌ಪಿ ಇಂಡಿಯಾ, ಈ ಷೇರುವಿಕ್ರಯ ಪ್ರಕ್ರಿಯೆಯ ವಹಿವಾಟು ಸಲಹಾ ಸಂಸ್ಥೆಯಾಗಿರಲಿದೆ.         

short by NP / read more at Prajavani

Comments