Skip to main content


ಹಳೆ ಹಾಡು ಹೊಸ ಡ್ಯಾನ್ಸ್: ಧೂಳೆಬ್ಬಿಸುತ್ತಿದೆ ಜಾಕ್ವೆಲಿನ್ ಕುಣಿತ

ಏಕ್ ದೋ ತೀನ್,,,ಚಾರ್ ಪಾಂಚ್ ಚೇ ಸಾತ್ ಆಠ್....ಎಂದು ಆರಂಭವಾಗುವ ಹಿಂದಿ ಹಾಡನ್ನ ಕೇಳಿರಬಹುದು. ಈ ಹಾಡಿನಲ್ಲಿ ಮಾಧುರಿ ದೀಕ್ಷಿತ್ ಮಸ್ತ್ ಆಗಿ ಸೊಂಟ ಬಳುಕಿಸಿದ್ದರು. ಈ ಹಾಡು ಅಂದಿನ ಸಮಯದಲ್ಲಿ ಸೂಪರ್ ಹಿಟ್ ಆಗಿತ್ತು. ಇದೀಗ, ಮತ್ತೆ ಇದೇ ಹಾಡನ್ನ ಬಳಸಿ ಹೊಸ ಸಾಂಗ್ ಮಾಡಲಾಗಿದೆ. ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಅಭಿನಯದ 'ಭಾಗಿ-2' ಚಿತ್ರದಲ್ಲಿ ಈ ಎವರ್ ಗ್ರೀನ್ ಹಾಡನ್ನ ಬಳಸಲಾಗಿದೆ.
ಈ ಸ್ಪೆಷಲ್ ಹಾಡಿನಲ್ಲಿ ಹಾಟ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದು, ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಸದ್ಯ, ಹಾಡಿನ ಟೀಸರ್ ಮಾತ್ರ ರಿಲೀಸ್ ಆಗಿದ್ದು, ಕೇವಲ ಒಂದು ದಿನಕ್ಕೆ 22 ಲಕ್ಷಕ್ಕೂ ಅಧಿಕ ಜನ ಹಾಡನ್ನ ನೋಡಿ ಎಂಜಾಯ್ ಮಾಡಿದ್ದಾರೆ.
ಭಾಗಿ' ಚಿತ್ರವನ್ನ ನಿರ್ದೇಶನ ಮಾಡಿದ್ದ ಸಜೀದ್ 'ಭಾಗಿ-2' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದು, ಮಾರ್ಚ್ 30 ರಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾಗಿ ಸಿನಿಮಾ ಕುತೂಹಲ ಕೆರಳಿಸಿದೆ.     
Short by: Pawan / read more at Filmibeat