Skip to main content


ಕೇಂದ್ರದ ವಿರುದ್ಧ ಫೆಡರಲ್ ಫ್ರಂಟ್ ರಚನೆಗೆ ಮುಂದಾದ ಚಂದ್ರಬಾಬು ನಾಯ್ಡು?

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲವೆಂದು ಮುನಿಸಿಕೊಂಡು ಎನ್.ಡಿ.ಎ ಮೈತ್ರಿಕೂಟದಿಂದ ಹೊರಬಿದ್ದಿರುವ ಆ ರಾಜ್ಯದ ಮುಖ್ಯಮಂತ್ರಿ, ತೆಲುಗುದೇಶಂ ಪಕ್ಷದ(ಟಿಡಿಪಿ) ಮುಖ್ಯಸ್ಥ ನಾರ ಚಂದ್ರಬಾಬು ನಾಯ್ಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೆ ವಿವಿಧ ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಫೆಡರಲ್ ಫ್ರಂಟ್ ಸ್ಥಾಪಿಸಿ ಅದನ್ನು ಮುನ್ನಡೆಸುವ ಸಾಧ್ಯತೆಗಳಿವೆ.
ನಾಯ್ಡು ಹೊಸ ತಂತ್ರದ ಕುರಿತು ಈಗಾಗಲೇ ರಾಜಕೀಯ ವಲಯಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ. ಕೇಂದ್ರ ಸಚಿವ ಸಂಪುಟಕ್ಕೆ ತನ್ನ ಪಕ್ಷದ ಸಚಿವರಿಂದ ರಾಜೀನಾಮೆ ಕೊಡಿಸಿದ್ದು, ಎನ್ಡಿಎ ಜೊತೆ ಮೈತ್ರಿ ಮುರಿದುಕೊಂಡಿದ್ದು, ಇದೀಗ ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳು ಮಂಡಿಸಿರುವುದು ಸೇರಿದಂತೆ ಹಲವು ವಿಷಯಗಳಿಗಾಗಿ ಈಗೆ ಟಿಡಿಪಿ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.     
short by: NP / read more at News Mirchi