Skip to main content


ಮಗನ ಪತ್ನಿ ಮೇಲೆಯೇ ಕಣ್ಣಿಟ್ಟ ತಂದೆ ಜೈಲು ಪಾಲು

ಸೊಸೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಮಾವನೊಬ್ಬ ಜೈಲು ಸೇರಿದ್ದಾನೆ. ಘಟನೆ ರಾಂಚಿಯಲ್ಲಿ ನಡೆದಿದೆ. ಸೊಸೆ ತಂದೆ ದೂರಿನ ಮೇಲೆ ಆರೋಪಿ ಓಂ ಪ್ರಕಾಶ್ ಹಾಗೂ ಆತನ ಪತ್ನಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಓಂ ಪ್ರಕಾಶ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಾದ್ರೆ ಆತನ ಪತ್ನಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಸೋಮವಾರ ಪೀಡಿತೆ ಹಾಗೂ ಆಕೆ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಾವನ ಅಶ್ಲೀಲ ವರ್ತನೆಯನ್ನು ಸೊಸೆ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಳು. ಇದನ್ನು ಸಾಕ್ಷಿ ರೂಪದಲ್ಲಿ ಪೊಲೀಸರಿಗೆ ನೀಡಿದ್ದಳು.    
short by: NP / read more at Kannadadunia.com