Skip to main content


ನಿರ್ಮಾಪಕನ ವಿರುದ್ಧ ದೂರು ದಾಖಲಿಸಿದ ನಟಿ ಪ್ರಿಯಾಮಣಿ..!

ತೆಲುಗು 'ಅಂಗುಲಿಕಾ' ಚಿತ್ರಕ್ಕೆ ನಟಿ ಪ್ರಿಯಾಮಣಿಗೆ ಆಫರ್ ಮಾಡಲಾಗಿತ್ತು. ಆದರೆ, ಕೆಲ ಕಾರಣಗಳಿಗಾಗಿ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರಲಿಲ್ಲ. ಬಳಿಕ ಬೇರೆ ನಟಿಯ ಆಯ್ಕೆಯಾಗಿತ್ತು. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಟೀಸರ್ ವೀಕ್ಷಿಸಿದ ಪ್ರಿಯಾಮಣಿ ಚಿತ್ರತಂಡದ ವಿರುದ್ಧ ಹೈದರಾಬಾದ್‌ನ ಚಲನಚಿತ್ರ ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ.
ಸದ್ಯ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ತಮ್ಮ ಕೆಲ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ ಎಂದು ಪ್ರಿಯಾಮಣಿ ಆರೋಪಿಸಿದ್ದಾರೆ. ತಮ್ಮ ಅನುಮತಿ ಪಡೆಯದೆ ಫೋಟೋಗಳನ್ನು ಬಳಕೆ ಮಾಡಿರುವುದಕ್ಕೆ ಸೂಕ್ತ ಪರಿಹಾರ ನೀಡುವಂತೆ ಅವರು ಚಿತ್ರತಂಡಕ್ಕೆ ಆಗ್ರಹಿಸಿದ್ದಾರೆ.
short by: SP / read more at EenaduIndia