Skip to main content


ಅಪ್ಪು ಹೇರ್ ಸ್ಟೈಲ್ ಗೆ ವಿರೋಧ ವ್ಯಕ್ತಪಡಿಸಿದವರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಫ್ಯಾನ್ಸ್!

ಕನ್ನಡ ರಾಜರತ್ನ ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೆ ಹೊಸ ಸ್ಟೈಲಿಶ್ ಹೇರ್ ಸ್ಟೈಲ್ ಮೊನ್ನೆಯಷ್ಟೇ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಟ್ರೆಂಡ್ ಆಗುವುದರ ಜೊತೆಗೆ ಕನ್ನಡ ಸಂಘಟನೆಯೊಂದರ ವಿರೋಧ ವ್ಯಕ್ತವಾಗಿದೆ.

ಪುನೀತ್ ರಾಜ್ ಕುಮಾರ್ ಅವರ ಹೇರ್ ಸ್ಟೈಲ್ ಗೆ ಇಷ್ಟೊಂದು ತಲೆಕೆಡಿಸಿಕೊಂಡಿರುವ ಕನ್ನಡ ಸಂಘಟನೆ ಮಾಡಬೇಕಾದ ಕೆಲಸಗಳನ್ನ ಬಿಟ್ಟು ಈ ವಿಷ್ಯಕ್ಕೆ ಹೆಚ್ಚು ತಲೆಕೆಡಿಸಿಕೊಂಡಿದೆ. ಒಂದೇ ರೀತಿಯ ಸಿನಿಮಾ ಮಾಡಿದ್ರೆ ಜನರು ಇಷ್ಟಪಡುವುದಿಲ್ಲ. ಚಿತ್ರದಿಂದ ಚಿತ್ರಕ್ಕೆ, ಪಾತ್ರಗಳಿಂದ ಪಾತ್ರಕ್ಕೆ ವಿಭಿನ್ನತೆ, ಹೊಸತನ ನೀಡಬೇಕು. ಅಂತಹ ಪ್ರಯತ್ನವನ್ನ ಕಲಾವಿದರು ಮಾಡುತ್ತಾರೆ. ಈ ಹೇರ್ ಸ್ಟೈಲ್ ನಿಂದ ನಿಮಗೆ ನೋವುಂಟಾಗಿರಬಹುದು. ಆದ್ರೆ, ಈಗಿನ ಪ್ರೇಕ್ಷಕರು ಇದನ್ನೇ ನಿರೀಕ್ಷೆ ಮಾಡೋದು, ಎಂದು ಅಪ್ಪು ಅಭಿಮಾನಿಗಳು ಹಾಗೂ ಸಿನಿ ರಸಿಕರು ವಿರೋಧ ವ್ಯಕ್ತಪಡಿಸುವವರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

short by Shraman Jain / read more at Filmibeat Kannada