Skip to main content


ಲೈವ್ ಸಂದರ್ಶನದಲ್ಲೇ ನಟನಿಗೆ ಕಿಸ್ ಕೊಟ್ಟ ಕಿರಿಕ್ ಹುಡುಗಿ..!?

ಇದೇ ವಾರ ತೆರೆಗೆ ಅಪ್ಪಳಿಸಲಿರುವ "ಕಿರಿಕ್ ಪಾರ್ಟಿ" ಚಿತ್ರದ ರಿಮೇಕ್ "ಕಿರಕ್ ಪಾರ್ಟಿ" ಚಿತ್ರದ ಪ್ರಮೋಷನ್ ಜೋರಾಗಿಯೇ ನಡೆದಿದೆ. ಈ ಚಿತ್ರದಲ್ಲಿ 'ಕಿರಿಕ್' ಹುಡುಗಿ ಸಂಯುಕ್ತಾ ಕನ್ನಡದಲ್ಲಿ ನಿರ್ವಹಿಸಿದ್ದ ಆರ್ಯ ಪಾತ್ರವನ್ನೇ ತೆಲುಗಿನಲ್ಲಿ ನಿರ್ವಹಿಸಿದ್ದಾರೆ.

ಇತ್ತೀಚೆಗಷ್ಟೇ ಲೈವ್ ಸಂದರ್ಶನವೊಂದರಲ್ಲಿ ನಟ ನಿಖಿಲ್‌ ಸಿದ್ದಾರ್ಥ್ ಹಾಗೂ ಸಂಯುಕ್ತಾ ಕಾಣಿಸಿಕೊಂಡಿದ್ದರು.  ಈ ವೇಳೆ ಸಂದರ್ಶಕನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಯುಕ್ತಾ, "ಚಿತ್ರದಲ್ಲಿ ಒಂದು ಸೀನ್‌ಗಾಗಿ ನಿಖಿಲ್‌ನನ್ನು ಹೊಡೆಯಲು ಪ್ರಿಪೇರ್ ಆಗುತ್ತಿದೆ. ಈ ವೇಳೆ ಸಿದ್ದಾರ್ಥ್ ನಂಗೆ ವಾಪಸ್‌ ಹೋಡೆದ್ರೆ ಏನು ಮಾಡೋದು ಎಂದು ಭಯಗೊಂಡಿದ್ದೆ. ಆದರೆ, ಅವರು ಹಾಗೆ ಮಾಡಲಿಲ್ಲ. ನಾವು ಒಳ್ಳೆಯ ಫ್ರೆಂಡ್ಸ್‌," ಎಂದರು. ಇಷ್ಟಕ್ಕೆ ಸುಮ್ಮನಾಗದ ಸಂಯುಕ್ತಾ, ಪಕ್ಕದಲ್ಲಯೇ ಇದ್ದ ನಟ ನಿಖಿಲ್ ಕೆನ್ನೆಗೆ ಒಂದು ಮುತ್ತು ನೀಡಿದ್ರು.

short by Shraman Jain / read more at EeNadu India

Comments