Skip to main content


ಮಾಹಿತಿ ಸೋರಿಕೆ ಸರಣಿಗೆ ‘ಸಿದ್ದರಾಮಯ್ಯ ಆ್ಯಪ್‌’

ಸಾರ್ವಜನಿಕರ ಖಾಸಗಿ ಮಾಹಿತಿ ಕಳವು ವಿಷಯ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವಾಗಲೇ, ರಾಜ್ಯದಲ್ಲಿ ಮುಖ್ಯಮಂತ್ರಿ ‘ಸಿದ್ದರಾಮಯ್ಯ ಆ್ಯಪ್‌’ನಿಂದ ಬಳಕೆದಾರರ ವೈಯಕ್ತಿಕ ಮಾಹಿತಿ ಮೈಸೂರಿನ ಖಾಸಗಿ ಕಂಪನಿಯೊಂದಕ್ಕೆ ಸೋರಿಕೆಯಾಗಿರುವುದು ರಾಜಕೀಯ ಸಮರಕ್ಕೆ ಕಾರಣವಾಗಿದೆ.

ಮಾಹಿತಿ ಸೋರಿಕೆ ವಿಷಯ ಬಯಲಿಗೆ ಬರುತ್ತಿದ್ದಂತೆ ಗುರುವಾರವೇ ‘ಸಿದ್ದರಾಮಯ್ಯ ಆ್ಯಪ್‌’ ಅನ್ನು ಸ್ಥಗಿತಗೊಳಿಸಲಾಗಿದೆ. ‘ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಗೂಗಲ್‌ ಮತ್ತು ಆ್ಯಪಲ್ ವೇದಿಕೆಗಳಲ್ಲಿ ಸಿದ್ದರಾಮಯ್ಯ ಆ್ಯಪ್‌ ಸ್ಥಗಿತಗೊಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.      

short by NP / read more at Prajavani

Comments