Skip to main content


ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಲೋಕಾರ್ಪಣೆ

ಸ್ವರ್ಗವನ್ನೇ ಧರೆಗಿಳಿಸುವ ಗಾಜಿನ ಅರಮನೆಯನ್ನ ಸಿಎಂ ಸಿದ್ದರಾಮಯ್ಯ ಇಂದು ಅನಾವರಣಗೊಳಿಸಲಿದ್ದಾರೆ. ಕೆರೆಯ ದಡದಲ್ಲಿ ಸುಂದರವಾಗಿ ಕಾಣುತ್ತಿರುವ ಗಾಜಿನ ಮನೆ, ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಅನ್ನೇ ನಾಚಿಸುವಂತೆ ರೆಡಿಯಾಗುತ್ತಿರುವ ಗಾಜಿನ ಸುಂದರಿ. ಇಡೀ ದೇಶಕ್ಕೆ ದೊಡ್ಡದು ಮತ್ತು ವಿಶಿಷ್ಟ ಎನ್ನಬಹುದಾದ ಲಕ್ಷಣಗಳನ್ನ ಈ ಗಾಜಿನ ಅರಮನೆ ಹೊಂದಿದೆ. ಇದು ನಿರ್ಮಾಣವಾಗಿರೋದು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ. ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂದುವಾಡ ಕೆರೆ ಬಳಿ 108 ಮೀಟರ್ ಉದ್ದ, 68 ಮೀಟರ್ ಅಗಲ, 18 ಮೀಟರ್ ಎತ್ತರದಲ್ಲಿ ಗಾಜಿನ ಅರಮನೆ ನಿರ್ಮಾಣವಾಗಿದೆ.
    
short by: NP / read more at Publictv.in