Skip to main content


ಅಪ್ಪು ಅಭಿಮಾನಿಗಳು ’ರಚಿತಾ ಬೇಡ’ ಎನ್ನಲು ಕಾರಣವೇನು!?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ - ಪವನ್ ಒಡೆಯರ್ ಕಾಂಬಿನೇಷನ್ ನ 'ನಟ ಸಾರ್ವಭೌಮ' ಚಿತ್ರಕ್ಕೆ ನಾಯಕಿಯಾಗಿ ಡ್ಹಿಂಪಲ್ ಕ್ವೀನ್ ರಚಿತಾ ರಾಮ್ ಆಯ್ಕೆ ಆಗಿರುವ ವಿಷಯ ನಿಮಗೆ ಈಗಾಗಲೇ ತಿಳಿದಿರಬಹುದು. ಆದರೆ ಅಪ್ಪು ಫ್ಯಾನ್ಸ್ ಮಾತ್ರ ರಚಿತಾ ರಾಮ್ ಬೇಡ ಎನ್ನುತ್ತಿದ್ದಾರೆ, ಹಾಗು ಅಭಿಮಾನಿಗಳೆಲ್ಲಾ ಟ್ವಿಟರ್‌ನಲ್ಲಿ 'ರಚಿತಾ ಬೇಡ' ಎನ್ನುವ ಅಭಿಯಾನವನ್ನೇ ಶುರು ಮಾಡಿಬಿಟ್ಟಿದ್ದಾರೆ.

ಬೇಡ ಎನ್ನಲು ಕಾರಣ ಇಷ್ಟೇ, ಚಕ್ರವ್ಯೂಹ ಚಿತ್ರದಲ್ಲಿ ಮೊದಲ ಬಾರಿಗೆ ಪುನೀತ್‌ಗೆ ರಚಿತಾ ನಾಯಕಿಯಾಗಿ ನಟಿಸಿದ್ರು. ಚಕ್ರವ್ಯೂಹದ ಪ್ರೊಮೋಶನ್‌ ವೇಳೆಯಲ್ಲಿ 'ನಿಮ್ಮ ಅಪ್ಪು ಸಿನಿಮಾ ನಿಮಗಿಷ್ಟವಾಗುತ್ತೆ, ನಿಮ್ಮ ಅಪ್ಪು ಸಿನಿಮಾ ಖಂಡಿತಾ ನೋಡಿ' ಅಂತಲೇ ಎನ್ನುತ್ತಿದ್ರು. ಅಭಿಮಾನಿಗಳು ರೊಚ್ಚಿಗೆದ್ದಿದ್ದೇ ಆಗ. ಸಿನಿಮಾದಲ್ಲಿ ಅಪ್ಪುನೇ ಸ್ಟಾರ್ ನಿಜ. ಆದರೆ ಇವರೂ ನಾಯಕಿಯಲ್ವಾ? ಅಂದ್ಮೇಲೆ ಹೀಗೆ ಹೇಳೋದು ಸರಿಯಲ್ಲಾ ಎನ್ನುವ ದನಿ ಆಗಲೇ ದೊಡ್ಡದಾಯ್ತು. ಆದ್ರೆ ಅಷ್ಟರಲ್ಲಿ ಪುನೀತ್ ಮಧ್ಯಪ್ರವೇಶ ಮಾಡಿ, ಸಿನಿಮಾ ಮುಖ್ಯ. ಏನೋ ತಿಳೀದೆ ಹಾಗೆ ಹೇಳಿದ್ದಾರೆ. ವಿಷ್ಯ ಇಲ್ಲಿಗೇ ಬಿಟ್ಟುಬಿಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡ್ಕೊಂಡ್ರು. ವಿಷಯ ಅಲ್ಲಿಗೆ ಮುಗಿಯಿತು.

ಈ ಬೆಳವಣಿಗೆ ಎಲ್ಲಿಗೆ ತಲ್ಪುತ್ತೋ ಎನ್ನುವುದೇ ಕುತೂಹಲ. ಕಾದು ನೋಡೋಣ!

short by Shraman Jain / read more at EeNadu