Skip to main content


ತಂಪು ಪಾನೀಯ ಟಿನ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದೆ

ಜೋಶ್ ಹೆನ್ಲೆ ಭಾನುವಾರ ರಾತ್ರಿ ಅರ್ಕಾನ್ಸಾಸ್ ನ ಪೆಟ್ರೋಲ್ ಬಂಕ್ ಬಳಿ ರೆಡ್ ಬುಲ್ ತಂಪು ಪಾನೀಯವನ್ನು ಖರೀದಿಸಿದ್ದಾರೆ. ಆದರೆ ಬಳಿಕ ಅವರು ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಹೆನ್ಲೆ ತಂಪು ಪಾನೀಯದಲ್ಲಿ ಪತ್ತೆಯಾದ ಇಲಿಯ ವಿಡಿಯೋವನ್ನು ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸತ್ತ ಇಲಿಯನ್ನು ತೋರಿಸಲು ಕತ್ತರಿಯಿಂದ ಟಿನ್‍ನ ಮಧ್ಯದಲ್ಲಿ ಕತ್ತರಿಸಿದ್ದಾರೆ. ರೆಡ್ ಬುಲ್ ಅನ್ನು ಪರೀಕ್ಷಿಸಿ ಅದರಲ್ಲಿ ಸತ್ತ ಇಲಿಗಳು ಇರುತ್ತವೆ ಎಂದು ಹೇಳಿ ಜನರನ್ನು ಒತ್ತಾಯಿಸುತ್ತಿದ್ದಾರೆ. ವಿಡಿಯೋವನ್ನು ಪೋಸ್ಟ್ ಮಾಡಿದಾಗಿನಿಂದ 1,02,500 ಕ್ಕಿಂತ ಹೆಚ್ಚು ಬಾರಿ ಶೇರ್ ಆಗಿದೆ. ಜೊತೆಗೆ ಸುಮಾರು 3,000 ಕ್ಕೂ ಹೆಚ್ಚು ರಿಯಾಕ್ಷನ್ಸ್ ಬಂದಿದೆ.     
short by: NP / read more at Public TV