Skip to main content


ಪ್ರಭಾಸ್‌ ಚಿತ್ರಕ್ಕೆ ನಾಯಕಿಯಾಗುವ ಅದೃಷ್ಟ ಪಡೆದ್ರು ಈ ನಟಿ

ಬಾಹುಬಲಿ ಖ್ಯಾತಿಯ ಪ್ರಭಾಸ್‌ 'ಸಾಹೋ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ದುಬೈನಲ್ಲಿ ನಡೆಯುತ್ತಿದೆ. ಇದರ ಜತೆಗೆ ಪ್ರಭಾಸ್‌ ಅವರ ಮುಂದಿನ ಚಿತ್ರದ ಪ್ಲಾನ್ ಸಿದ್ಧವಾಗಿದೆ. ಯುವಿ ಕ್ರಿಯೇಷನ್ಸ್‌ನಲ್ಲಿ ರೆಡಿಯಾಗಲಿರುವ ಈ ಚಿತ್ರವನ್ನು ರಾಧಾ ಕೃಷ್ಣ ಎಂಬುವರು ನಿರ್ದೇಶನ ಮಾಡಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಈಗಾಗಲೇ ನಾಯಕಿ ಕೂಡ ಫಿಕ್ಸ್ ಆಗಿದ್ದಾರೆ.
ಮೂಲಗಳ ಪ್ರಕಾರ ನಟಿ ಪೂಜಾ ಹೆಗಡೆ, ಪ್ರಭಾಸ್‌ ಜತೆ ತೆರೆ ಹಂಚಿಕೊಳ್ಳಲಿದ್ದಾರಂತೆ. ಈ ಚಿತ್ರಕ್ಕೆ ಸೈನ್ ಮಾಡಿದ್ದಾರಂತೆ ಪೂಜಾ. ಈಗಾಗಲೇ ತೆಲುಗು ಹಾಗೂ ತಮಿಳು ಚಿತ್ರರಂಗಕ್ಕೆ ಪೂಜಾ ಹೆಗಡೆ ಪರಿಚಿತರು. ಬಾಲಿವುಡ್‌ನ ಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ. ಇದೀಗ ಪ್ರಭಾಸ್‌ ಚಿತ್ರದಲ್ಲಿ ನಟಿಸುವ ಅವಕಾಶ ಇವರು ಗಿಟ್ಟಿಸಿಕೊಂಡಿದ್ದಾರಂತೆ. ಇದರ ಜತೆಗೆ ಜ್ಯೂ. ಎನ್‌ಟಿಆರ್ ಹಾಗೂ ಮಹೇಶ್ ಬಾಬು ಅವರ ಚಿತ್ರಗಳಿಗೂ ಕೂಡ ಸೈನ್ ಮಾಡಿದ್ದಾರೆ ನಟಿ ಪೂಜಾ ಹೆಗಡೆ.
short by: SP / read more at EenaaduIndia