Skip to main content


ಮುಫ್ತಿ ನಂತರ ಕೌಟುಂಬಿಕ ಸಿನಿಮಾದಲ್ಲಿ ಶ್ರೀಮುರುಳಿ

ಮುಫ್ತಿ ಸಿನಿಮಾ 100 ದಿನಗಳ ಯಶಸ್ಸಿನ ನಂತರ ತಮ್ಮ ಮುಂದಿನ ಸಿನಿಮಾ ತಯಾರಿಯಲ್ಲಿದ್ದಾರೆ, ಯುಗಾದಿ ವಿಶೇಷ ದಿನದಂದು ತಮ್ಮ ಮುಂದಿನ ಸಿನಿಮಾ ಪ್ರಕಟಿಸಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸುಮಾರು 30  ಕಥೆಗಳು ಬಂದಿವೆ, ಕೆಲವು ನಿರ್ದೇಶಕರುಗಳ ಜೊತೆ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. 
ಅವರ ಅಭಿಮಾನಿಗಳು ಮುಂದಿನ ಪ್ರಾಜೆಕ್ಟ್ ಬಗ್ಗೆ ಕಾಯುತ್ತಿದ್ದಾರೆ, ಶೀಘ್ರದಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೇ. ಬಹದ್ದೂರ್, ಭರ್ಜರಿ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಜೊತೆ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ.ಇದರ ಜೊತೆಗೆ ಶ್ರೀ ಮುರುಳಿ ತಮ್ಮ ಸ್ನೇಹಿತನ ಜೊತೆಗೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಕೂಡ ಆರಂಭಿಸಲಿದ್ದಾರೆ.  ತಮ್ಮ ಹೊಸ ಬ್ಯಾನರ್ ಅಡಿ ಹಲವು ಪ್ರಾಜೆಕ್ಟ್ ಗಳನ್ನು ಹೊರ ತರಲಿದ್ದಾರೆ, ಯುಗಾದಿ ಹಬ್ಬದಂದು ತಮ್ಮ ಹೊಸ ಯೋಜನೆಗಳ ಬಗ್ಗೆ ಘೋಷಿಸಲಿದ್ದಾರೆ.  

Short by: Pawanraj / read more at Kannada Prabha