Skip to main content


ಬಿಎಫ್​ಸಿಗೆ ಬೇವು, ಚೆನ್ನೈಯಿನ್​ಗೆ ಬೆಲ್ಲ

ಎದುರಾಳಿ ತಂಡದ ಬಲಿಷ್ಠ ರಕ್ಷಣಾ ಕೋಟೆ ಭೇದಿಸುವಲ್ಲಿ ವಿಫಲವಾದ ಬೆಂಗಳೂರು ಎಫ್​ಸಿ ತಂಡ 4ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್​ಎಲ್) ಫುಟ್​ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿತು. ಟೂರ್ನಿಯುದ್ದಕ್ಕೂ ಭರ್ಜರಿ ನಿರ್ವಹಣೆಯೊಂದಿಗೆ ಪ್ರಶಸ್ತಿ ಫೇವರಿಟ್ ಹಣೆಪಟ್ಟಿ ಹೊಂದಿದ್ದ ಬಿಎಫ್​ಸಿ ತಂಡ 2-3 ಗೋಲುಗಳಿಂದ ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಹಾಗೂ ಕ್ರಿಕೆಟಿಗ ಎಂಎಸ್ ಧೋನಿ ಸಹ-ಮಾಲೀಕತ್ವದ ಚೆನ್ನೈಯಿನ್​ಎಫ್​ಸಿ ತಂಡಕ್ಕೆ ಶರಣಾಯಿತು. ಚೆನ್ನೈ ಪರ ಮೈಲ್​ಸನ್ ಅಲ್ವೆಸ್ (17 ಮತ್ತು 45ನೇ ನಿಮಿಷ) 2 ಗೋಲು ಸಿಡಿಸಿದರೆ, ರಾಫೆಲ್ ಅಗುಸ್ಟೊ (67ನೇ ನಿಮಿಷ) ಒಂದು ಗೋಲು ಬಾರಿಸಿ ಗೆಲುವಿನ ರೂವಾರಿ ಗಳೆನಿಸಿದರು. ಬಿಎಫ್​ಸಿಗೆ ಸುನೀಲ್ ಛೇಟ್ರಿ 9ನೇ ನಿಮಿಷದಲ್ಲೇ ಗೋಲು ಸಿಡಿಸಿ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಅದನ್ನು ಉಳಿಸಿಕೊಳ್ಳುವಲ್ಲಿ ಬಿಎಫ್​ಸಿ ಸಫಲವಾಗಲಿಲ್ಲ. ಕೊನೆಗೆ ಮಿಕು (90ನೇ ನಿಮಿಷ) ತಂಡದ ಸೋಲಿನ ಅಂತರ ತಗ್ಗಿಸಿದರು.           
Short by: Prajwal / read more at Vijayavani