Skip to main content


ಸೆಮಿಫೈನಲ್‌ಗೆ ಸಮೀರ್‌ ವರ್ಮಾ!

ಮಿಂಚಿನ ಆಟ ಆಡಿದ ಭಾರತದ ಸಮೀರ್‌ ವರ್ಮಾ, ಒರ್ಲೀನ್ಸ್‌ ಓಪನ್‌ ವಿಶ್ವ ಸೂಪರ್‌ –100 ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಸಮೀರ್‌ 17–21, 21–19, 21–15ರಿಂದ ಫ್ರಾನ್ಸ್‌ನ ಲೂಕಾಸ್‌ ಕೊರ್ವೀ ಅವರನ್ನು ಸೋಲಿಸಿದರು. ತವರಿನ ಅಭಿಮಾನಿಗಳ ಮುಂದೆ ಕಣಕ್ಕಿಳಿದಿದ್ದ ಲೂಕಾಸ್‌ ಮೊದಲ ಗೇಮ್‌ನಲ್ಲಿ  ಉತ್ತಮವಾಗಿ ಆಡಿದರು. ಆರಂಭಿಕ ನಿರಾಸೆಯಿಂದ ಸಮೀರ್‌ ಎದೆಗುಂದಲಿಲ್ಲ.  ಅವರು ಎರಡನೇ ಗೇಮ್‌ನಲ್ಲಿ ಉತ್ತಮ ಆಟ ಆಡಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಉಭಯ ಆಟಗಾರರೂ ತುರುಸಿನ ಪೈಪೋಟಿ ನಡೆಸಿದರು. ಪಾದರಸದಂತಹ ಚಲನೆಯ ಮೂಲಕ ಎದುರಾಳಿ ಬಾರಿಸುತ್ತಿದ್ದ ಷಟಲ್‌ ಹಿಂತಿರುಗಿಸುತ್ತಿದ್ದ ಅವರು, ಚುರುಕಿನ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಹೆಕ್ಕಿದರು. ಇದರಿಂದ ವಿಚಲಿತರಾದಂತೆ ಕಂಡ ಲೂಕಾಸ್‌ ಹಲವು ತಪ್ಪುಗಳನ್ನು ಮಾಡಿದರು. ಇದರ ಲಾಭ ಎತ್ತಿಕೊಂಡ ಸಮೀರ್‌ ಗೆಲುವಿನ ತೋರಣ ಕಟ್ಟಿದರು.

short by Prajwal / read more at Prajavani

Comments