Skip to main content


ಅಚ್ಚೆ ದಿನ್ ಪ್ರಚಾರಕ್ಕೆ ಧಕ್ಕೆ ಬಂದಿದೆ, ದುರಾದೃಷ್ಟಕ್ಕೆ ಪ್ರಧಾನಿ ನಿರಾಕರಣೆಯಲ್ಲಿ ಬದುಕುತ್ತಿದ್ದಾರೆ: ರಾಹುಲ್ ಗಾಂಧಿ

ದೇಶದಲ್ಲಿ ಉತ್ಪಾದನೆ ವಲಯವನ್ನು ಬೆಳೆಸದಿದ್ದರೆ ಸಾಮೂಹಿಕ ನಿರುದ್ಯೋಗವುಂಟಾಗುವ ಸಾಧ್ಯತೆಯಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಪೌಲ್ ಕ್ರುಗ್ಮಾನ್ ನೀಡಿರುವ ಹೇಳಿಕೆಯನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸಿರುವ ರಾಹುಲ್ ಗಾಂಧಿ, ದುರದೃಷ್ಟವಶಾತ್ ನಿರಾಕರಣೆಯಲ್ಲಿ ಬಹುಕುತ್ತಿರುವ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಎಂದು ಜರೆದಿದ್ದಾರೆ.
ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಅಮೆರಿಕಾದ ಆರ್ಥಿಕತಜ್ಞ ನೀಡಿರುವ ಹೇಳಿಕೆ ವಿರೋಧ ಪಕ್ಷಗಳು ಕಳೆದ ಎರಡು ವರ್ಷಗಳಿಂದ ಹೇಳುತ್ತಾ ಬಂದಿರುವುದನ್ನು ಹೇಳಿ ಪ್ರಚಾರ ಮಾಡುತ್ತಿದ್ದಾರಷ್ಟೆ ಎಂದರು.     
short by: NP / read more at Kannadaprabha.com