Skip to main content


ಶಾಕಿಂಗ್ : ನಟ ಕಿಚ್ಚ ಸುದೀಪ್ ಗೆ ಸಾಮಾಜಿಕ ಜಾಲತಾಣದಲ್ಲಿ ಇದೆಂತಹ ಅವಮಾನ!?

ಸಾಮಾಜಿಕ ಜಾಲತಾಣದಲ್ಲಿ ತಮ್ಮಿಷ್ಟಕ್ಕೆ ಬಂದ ಹಾಗೇ, ಹೆಂಡ ಕುಡಿದ ಕೋತಿಗಳ ಹಾಗೇ ಟ್ರೋಲ್ ಪೇಜ್ ಗಳು ವರ್ತನೆ ಮಾಡುತ್ತಿದ್ದು ಸಾರ್ವಜನಿಕ ವಲಯದಲ್ಲಿ ತ್ರೀವ ಅಸಮಾಧಾನ ಮೂಡಿಸುತ್ತಿದೆ.

ಈ ನಡುವೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬದ ವಿರುದ್ಧ ಕೆಲವರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವವರಿಗೆ ಹಾಗೂ ಅವಮಾನ ಮಾಡುತ್ತಿರುವವರ ವಿರುದ್ಧ ಅಭಿಮಾನಿ ಸಂಘ ಸೈಬರ್ ಕ್ರೈಂಗೆ ದೂರು ನೀಡಿದೆ.

ಸುದೀಪ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷರಾದ ನವೀನ್ ಗೌಡ ಸೈಬರ್ ಕ್ರೈಂಗೆ ದೂರು ನೀಡಿ ಟ್ರೋಲ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಏಲಿಯನ್ ದಿ ಹೆಬ್ಬುಲಿ, ದೇವಣ್ಣ ಅಂಗಡಿ, ಬಿಗ್ ಬಾಸ್ ಸುದೀಪ್ ಎನ್ನುವ ಟ್ರೋಲ್ ಪೇಜ್ ಗಳಲ್ಲಿ ಸುದೀಪ್‍ರನ್ನು ತೀರಾ ಕೆಳ ಮಟ್ಟದ ಭಾಷೆ ಬಳಸಿ ಗೇಲಿ ಮಾಡಲಾಗುತ್ತಿದೆ ಎನ್ನಲಾಗಿದೆ.      

short by Pawan / read more at Kannada News Now

Comments