Skip to main content


ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಹೊಸ ವಾಹನಗಳನ್ನು ಖರೀದಿಸುವ ವೇಳೆ ನಿಮ್ಮಷ್ಟದ ಹಳೆಯ ವಾಹನಗಳ ಸಂಖ್ಯೆಯನ್ನು ಬಳಸಿಕೊಳ್ಳುವ ಅವಕಾಶ ನೀಡಲಾಗುತ್ತಿದ್ದು, ಸಾರಿಗೆ ಇಲಾಖೆಯು ಇದಕ್ಕಾಗಿ ಹೊಸ ನಿಯಮ ಒಂದನ್ನು ಜಾರಿಗೆ ತರುತ್ತಿದೆ. ಹೊಸ ಯೋಜನೆಯ ಪ್ರಕಾರ ವಾಹನ ಮಾಲೀಕರು ಆನ್‍ಲೈನ್ ಮುಖಾಂತರವೇ ಹಳೆಯ ನೋಂದಣಿ ಸಂಖ್ಯೆಯನ್ನು ಪಡೆಯಬಹುದಾಗಿದ್ದು, ನಿಮ್ಮ ನೆಚ್ಚಿನ ಸಂಖ್ಯೆಯನ್ನು ನಿಮ್ಮ ಬಳಿಯೇ ಉಳಿಸಿಕೊಳ್ಳಲು ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತೆ.      
ಆನ್‍ಲೈನ್ ನಲ್ಲಿ ಅಪ್ಲಿಕೇಷನ್ ಸಲ್ಲಿಸಿದ ನಂತರ ನಿಮ್ಮ ಹಳೆಯ ನೋಂದಣಿ ನಂಬರ್ ಮಾಹಿತಿಯ ಬಗ್ಗೆ ಒಂದು ಸ್ಲಿಪ್ ನೀಡಲಾಗುತ್ತದೆ. ಆ ಸ್ಲಿಪ್ ಮಾಹಿತಿಯನ್ನು ಸಾರಿಗೆ ಇಲಾಖೆಗೆ ಮರಳಿ ಕೊಟ್ಟಲ್ಲಿ ಅವರು ತಮ್ಮ ವ್ಯವಸ್ಥೆಯಲ್ಲಿ ನಮೂದಿಸಿದ ನಂತರ ಅದೇ ಅಂಕಿಗಳಲ್ಲಿ ಹೊಸ ವಾಹನಕ್ಕೆ ಬಳಸಬಹುದಾದ ಸಂಖ್ಯೆಯ ಮಾಹಿತಿಯನ್ನು ಒದಗಿಸುತ್ತಾರೆ.            
Short by: Pawan / read more at Karnataka sudigalu