Skip to main content


ಹೆಚ್​ಡಿಕೆ ಕನಸಿಗೆ ಕರ್ನಾಟಕಕ್ಕೆ ಪವರ್​ ಸ್ಟಾರ್​ ಪವನ್ ಕಲ್ಯಾಣ್ ಸಾಥ್! ಜೆಡಿಎಸ್ ಪರ ಪ್ರಚಾರ.

ಇನ್ನೇನು ವಿಧಾನಸಭಾ ಚುನಾವಣೆಗೆ ತಿಂಗಳಷ್ಟೇ ಬಾಕಿ ಉಳಿದಿದೆ. ಈ ಬಾರಿ ರಾಜಕೀಯದ ರಂಗು ಚಿತ್ರರಂಗದಲ್ಲಿಯೂ ತುಸು ಹೆಚ್ಚೇ ಪ್ರತಿಫಲಿಸುತ್ತಿದೆ. ನಾನಾ ರಾಜಕೀಯ ಪಕ್ಷಗಳ ತಮ್ಮ ಪರವಾಗಿ ನಟ ನಟಿಯರನ್ನು ಪ್ರಚಾರಕ್ಕೆ ಸೆಳೆದುಕೊಳ್ಳುವ ಕಸರತ್ತನ್ನೂ ತೀವ್ರಗೊಳಿಸಿವೆ. ಹೀಗಿರುವಾಗಲೇ ಕರ್ನಾಟಕದಲ್ಲಿ ಜೆಡಿಎಸ್ ಪರ ಪ್ರಚಾರ ನಡೆಸಲು ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಕರೆತರಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಯಾರಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಗಳು ಕೇಳಿಬರುತ್ತಿವೆ.
ಈಗಾಗಲೇ ಆಂಧ್ರದಲ್ಲಿ ತಮ್ಮದೇ ‘ಜನ ಸೇನಾ’ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿ ಒಂದು ಮಟ್ಟದ ಅಲೆಯನ್ನು ಸೃಷ್ಟಿಸಿರುವ ಪವನ್ ಕಲ್ಯಾಣ್ ಆಂಧ್ರ ರಾಜಕೀಯ ವಲಯದಲ್ಲಿ ಭಾರಿ ಕುತೂಹಲವನ್ನು ಕೆರಳಿಸಿದ್ದಾರೆ. ಮೊದಲಿನಿಂದಲೂ ಅವರ ಮತ್ತು ಕುಮಾರ ಸ್ವಾಮಿಯವರ ನಡುವೆ ಉತ್ತಮ ಸ್ನೇಹವಿರುವುದರಿಂದ ಅವರು ಜೆಡಿಎಸ್ ಪರ ಪ್ರಚಾರ ಮಾಡಲು ಕರ್ನಾಟಕಕ್ಕೆ ಬರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.     
Short by: Pawan / read more at halli katte