Skip to main content


ಫಲ ನೀಡುವುದೇ ಬಿಜೆಪಿ ಚಾಣಕ್ಯ ನಡೆ?

ಇದೇ 23ರಂದು ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ 58 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇಲ್ಮನೆಯಲ್ಲಿ ಸಂಖ್ಯಾಬಲ ವೃದ್ಧಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸಿದೆ. ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 10 ಸ್ಥಾನಗಳಿಗೆ ಆಡಳಿತಾರೂಢ ಬಿಜೆಪಿ 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಕುತೂಹಲ ಹುಟ್ಟಿಸಿದೆ.
ಸದ್ಯದ ಲೆಕ್ಕದ ಪ್ರಕಾರ ಸಮಾಜವಾದಿ ಪಕ್ಷ 47 ಶಾಸಕರನ್ನು ಹೊಂದಿರುವುದರಿಂದ ಆ ಪಕ್ಷದ ಏಕೈಕ ಅಭ್ಯರ್ಥಿ ಜಯಾ ಬಚ್ಚನ್‌ ಸುಲಭವಾಗಿ ಗೆಲ್ಲಬಲ್ಲರು. ಎಸ್ಪಿಯ ಹೆಚ್ಚುವರಿ 10 ಮತಗಳಷ್ಟೇ ಅಲ್ಲದೇ, ಅನಿಲ್‌ ಅಗರ್ವಾಲ್‌ ಪ್ರಭಾವದಿಂದ ಮತ್ತಷ್ಟು ಮತಗಳನ್ನು ಸೆಳೆದುಕೊಳ್ಳಲು ಸಾಧ್ಯವಾದರೆ ಬಿಜೆಪಿ ಅಭ್ಯರ್ಥಿಗಳ ಹಾದಿ ಸುಗಮವಾಗುತ್ತದೆ.     
short by: NP / read more at Vijaya Karnataka