Skip to main content


"ಕವಚ"ದಲ್ಲಿ ವಿಭಿನ್ನ ಗೆಟಪ್ ನಲ್ಲಿ ಶಿವರಾಜ್ ಕುಮಾರ್

ಟಗರು ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ನೋಡಲು ಜನರು ಕಾತರರಾಗಿದ್ದಾರೆ. ಅವರ ಮುಂದಿನ ಚಿತ್ರ ಕವಚದಲ್ಲಿ ಇನ್ನೂ ವಿಶಿಷ್ಟ ಪಾತ್ರವನ್ನು ನೋಡಬಹುದು.

ಶಿವಮೊಗ್ಗ, ಸಾಗರ ಮತ್ತು ಸಿಗಂದೂರುಗಳಲ್ಲಿ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ ಪ್ರಿಯದರ್ಶನ್ ನಿರ್ದೇಶನದ ಕ್ರೈಮ್ ಆಧಾರಿತ ಒಪ್ಪಮ್ ಚಿತ್ರದಿಂದ ಸ್ಪೂರ್ತಿ ಪಡೆದು ಕವಚ ಚಿತ್ರವನ್ನು ಜಿವಿಆರ್ ವಾಸು ನಿರ್ದೇಶಿಸುತ್ತಿದ್ದಾರೆ. ಇಲ್ಲಿ ಶಿವರಾಜ್ ಕುಮಾರ್ ದೃಷ್ಟಿದೋಷವುಳ್ಳ ವ್ಯಕ್ತಿಯಾಗಿ ನಟಿಸುತ್ತಿದ್ದಾರೆ.

ಶಿವರಾಜ್ ಕುಮಾರ್ ಅವರ ಜೊತೆ ಇಶಾ ಕೊಪ್ಪಿಕರ್, ಬಾಲ ಕಲಾವಿದೆ ಮೀನಾಕ್ಷಿ, ತಬಲಾ ನಾಣಿ. ಕೃತಿಕಾ ಜಯರಾಮ್, ವಶಿಷ್ಟ ಸಿಂಹ, ರವಿ ಕಾಳೆ ಮೊದಲಾದವರು ನಟಿಸುತ್ತಿದ್ದಾರೆ. ಸಂಭಾಷಣೆಯ ಭಾಗವನ್ನು ಚಿತ್ರತಂಡ ಮುಗಿಸಿದ್ದು ಕೆಲವು ಫೈಟಿಂಗ್ ಸೀನ್ ಗಳು ಬಾಕಿ ಉಳಿದಿವೆ. ರವಿ ವರ್ಮ ಸಾಹಸ ದೃಶ್ಯಗಳನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕೆಲವು ಹಾಡುಗಳ ಚಿತ್ರೀಕರಣ ಕೂಡ ಬಾಕಿಯಿದೆ.

short by Pawan / read more at Kannada Prabha

Comments