Skip to main content


ಹುಡುಗಿ ಸಾವಿಗೆ ಕಾರಣವಾಯ್ತು ಚ್ಯೂಯಿಂಗಮ್

ಚ್ಯೂಯಿಂಗಮ್ ನಿಂದಾಗಿ ಬಾಲಕಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಗುತ್ತಲದಲ್ಲಿ ನಡೆದಿದೆ. ಗೌರಮ್ಮ ಬುಧವಾರ ರಾತ್ರಿ ಚ್ಯೂಯಿಂಗಮ್ ಜಗಿಯುತ್ತಾ ಮಲಗಿದ್ದಾಳೆ. ನಿದ್ದೆಯಲ್ಲಿ ಆಕೆಗೆ ಕೆಮ್ಮು ಬಂದಿದ್ದು, ಕೆಮ್ಮಿದ ಸಂದರ್ಭದಲ್ಲಿ ಚ್ಯೂಯಿಂಗಮ್ ಗಂಟಲಲ್ಲಿ ಸಿಲುಕಿದೆ. ಇದರಿಂದಾಗಿ ಅಸ್ವಸ್ಥಳಾದ ಗೌರಮ್ಮಳನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

short by: NP / read more at Kannadadunia